ಬರ್ತ್ ಡೇ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದ 6ಜನ ಡೆತ್!
ಕ್ಲೂಸರ್-ಲಾರಿ ಮದ್ಯೆ ಭೀಕರ ಅಪಘಾತ: ಆರು ಜನ ಸಾವು
ಹಾವೇರಿ: ರಾಣೇಬೆನ್ನೂರು ತಾಲೂಕಿನ ಹಲಗೇರಿ ಬಳಿ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಗೆ ಕ್ಲೂಸರ್ ವಾಹನ ಡಿಕ್ಕಿ ಆಗಿದೆ. ಪರಿಣಾಮ ಕ್ಲೂಸರ್ ವಾಹನದಲ್ಲಿದ್ದ 6ಜನ ಸಾವಿಗೀಡಾದ ದುರ್ಘಟನೆ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ಸಂಭವಿಸಿದೆ. ಐವರು ಮಹಿಳೆಯರು ಹಾಗೂ ಓರ್ವ ಪುರುಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರು ಜನ ತೀವ್ರ ಗಾಯಗೊಂಡಿದ್ದು ರಾಣೇಬೆನ್ನೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣ, ಮಾಕನೂರು ಹಾಗೂ ಕೋಡಿಯಾಲ ಹೊಸಪೇಟೆ ಗ್ರಾಮದವರೆಂದು ತಿಳಿದುಬಂದಿದೆ. ನಾಗರಾಜ ಪೂಜಾರ, ಪೂರ್ಣಿಮಾ, ನಾಗಮ್ಮ, ಗೌರಮ್ಮ, ಗಂಗಮ್ಮ, ಮೃತರೆಂದು ಗುರುತಿಸಲಾಗಿದೆ. ತಿಮ್ಮಕ್ಕ, ಚನ್ನಬಸ್ಸಪ್ಪ, ಮಂಜುನಾಥ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂರು ವರ್ಷದ ಮಗುವಿನ ಬರ್ತಡೇ ಕಾರ್ಯಕ್ರಮಕ್ಕಾಗಿ ಪಟ್ಟಣಕ್ಕೆ ತೆರಳಿದ್ದರು. ಬರ್ತಡೇ ಕಾರ್ಯಕ್ರಮ ಮುಗಿಸಿಕೊಂಡು ಸಿಗಂಧೂರಿನಿಂದ ಗ್ರಾಮಕ್ಕೆ ಹಿಂದಿರುಗುವಾಗ ದುರ್ಘಟನೆ ನಡೆದಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದ ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ತಿಳಿದು ಬರಬೇಕಿದೆ.