ಟಿಪ್ಪರ್ ಡಿಕ್ಕಿ ತಂದೆ ಪಾರು, ಬಾಲಕಿ ಸಾವು
ಶಹಾಪುರಃ ಅಪಘಾತ ಬಾಲಕಿ ಸಾವು
ಶಹಾಪುರಃ ಸಮೀಪದ ನವೋದಯ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೋರ್ವಳು ಅಭ್ಯಾಸಕ್ಕಾಗಿ ಬೇಕಾದ ಸಾಮಾಗ್ರಿ ಖರೀದಿಸಲು ತನ್ನ ತಂದೆಯೊಡನೆ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ರಸ್ತೆ ಕ್ರಾಸ್ ಮಾಡುವಾಗ ಟಿಪ್ಪರವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ನಂದಿನಿ ಹೊಟೇಲ್ ಹತ್ತಿರ ನಡೆದಿದೆ.
ಸೃಷ್ಟಿ ತಂದೆ ವೀರುಪಾಕ್ಷಿ (12) ಎಂಬ ಬಾಲಕಿಯೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ಸಮೀಪದ ಹೋತಪೇಟ ಗ್ರಾಮದ ಹತ್ತಿರ ಜವಾಹರ ನವೋದಯ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಬಾಲಕಿ ಅಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ.
ಮೂಲತಃ ತಾಲೂಕಿನ ದಿಗ್ಗಿ ಗ್ರಾಮದ ನಿವಾಸಿ ಎನ್ನಲಾಗಿದ್ದು, ತಂದೆ ವೀರುಪಾಕ್ಷಿ ಜೊತೆ ಅಭ್ಯಾಸಕ್ಕಾಗಿ ಬೇಕಾದ ಸಾಮಾಗ್ರಿ ಖರೀದಿಗೆ ಪಟ್ಟಣಕ್ಕೆ ಬಂದಿದ್ದರು.
ಅಲ್ಲದೆ ನಗರದ ಫೋಟೊ ಸ್ಭುಡಿಯೋ ವೊಂದರಲ್ಲಿ ಭಾವ ಚಿತ್ರ ತೆಗೆಸಿಕೊಂಡು ಹೊಟೇಲ್ ಕಡೆ ರಸ್ತೆ ಕ್ರಾಸ್ ಮಡುವಾಗ ಘಟನೆ ನಡೆದಿದೆ ಎನ್ನಲಾಗಿದೆ.
ತಂದೆ ರಸ್ತೆ ಕ್ರಾಸ್ ಮಾಡಿ ಮುಂದೆ ಹೋಗುತ್ತಿದ್ದಂತೆ, ಹಿಂದಿನಿಂದ ಬಾಲಕಿಯೂ ಬಾಲಕಿ ರಸ್ತೆ ಕ್ರಾಸ್ ಮಾಡುವಾಗ ದುರ್ಘಟನೆ ನಡೆಸಿಸೆ ಎನ್ನಲಾಗಿದೆ.
ದುರಂತ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ನಗರದ ಸರ್ಕಾರಿ ಆಸ್ಪತ್ರೆ ಮುಂದೆ ಸಂಬಂಧಿಕರು ಸಾರ್ವಜನಿಕರು ಸೇರಿದ್ದಾರೆ.