ಪ್ರಮುಖ ಸುದ್ದಿ
ಹೆದ್ದಾರಿಯಲ್ಲಿ ಲಾರಿ ಡಿಕ್ಕಿ : ಸ್ವಾಮೀಜಿ ಸೇರಿ ಇಬ್ಬರು ಸಾವು
ಹೂವು ಖರೀದಿಗೆ ನಿಂತ ಸ್ವಾಮೀಜಿಗೆ ಲಾರಿ ಡಿಕ್ಕಿ
ದಾವಣಗೆರೆ: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹೂವು ಖರೀಧಿಸಲು ನಿಂತವರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗುಜರಾತ್ ಮೂಲದ ಸುರಂನಾಥ್ ಸ್ವಾಮೀಜಿ (55) ಹಾಗೂ ದಾವಣಗೆರೆ ತಾಲೂಕಿನ ಕುಂದವಾಡ ಗ್ರಾಮದ ಗಂಗಾಧರ (50) ಸ್ಥಳದಲ್ಲೇ ಅಸುನೀಗಿದ ಘಟನೆ ನಡೆದಿದೆ.
ಮೃತ ಸುರಂನಾಥ್ ಸ್ವಾಮೀಜಿ ಗುಜರಾತಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದರು. ದಾವಣಗೆರೆ ಬಳಿಯ ಹೆದ್ದಾರಿಯಲ್ಲಿ ಹೂವು ಪಡೆಯಲು ನಿಂತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿಕ್ಕಿಯಾಗಿದ್ದು ದುರ್ಘಟನೆ ಸಂಭವಿಸಿದೆ.
ಐವರು ಸ್ವಾಮಿಗಳ ತಂಡ ಪಾದಯಾತ್ರೆ ನಡೆಸುತ್ತಿತ್ತು ಆ ಪೈಕಿ ಹಿರಿಯ ಸ್ವಾಮೀಜಿಗಳಾದ ಸುರಂನಾಥ ಸ್ವಾಮೀಜಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಜೊತೆಗಿದ್ದ ಸ್ವಾಮೀಜಿಗಳು ಹಿರಿಯ ಸ್ವಾಮೀಜಿಯ ಸಾವು ಕಂಡು ಕಣ್ಣೀರು ಹಾಕಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ