ಪ್ರಮುಖ ಸುದ್ದಿ
ಬುಲೆರೋ ವಾಹನ ಡಿಕ್ಕಿ ಬೈಕ್ ಸವಾರ ಸಾವು
ಯಾದಗಿರಿಃ ಬೈಕ್ ವೊಂದಕ್ಕೆ ನಾಲ್ಕು ಚಕ್ರದ ಬುಲೆರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮೂವರು ದುರ್ಮರಣ ಹೊಂದಿರುವ ಘಟನೆ ತಾಲೂಕಿನ ರಾಮಸಮುದ್ರ ಗ್ರಾಮ ಸಮೀಪ ನಡೆದಿದೆ.
ಬೈಕ್ ಗೆ ಡಿಕ್ಕಿ ಹೊಡೆದ ನಂತರ ಹಾಗೇ ಪರಾರಿಯಾಗಲು ಯತ್ನಿಸಿದ ಬುಲೆರೋ ವಾಹನ ಚಾಲಕ ಹಾಗು ಇತರರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಯಾದಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತರು ಮೂವರು ಯಾದಿಗಿರಿ ನಗರ ನಿವಾಸಿಗಳಾಗಿದ್ದಾರೆ. ಯಾದಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ