ಪ್ರಮುಖ ಸುದ್ದಿ
ಅಪಘಾತ ಬೈಕ್ ಸವಾರರಿಬ್ಬರ ಸಾವು
ಯಾದಗಿರಿಃ ಮೈಲಾರಲಿಂಗೇಶ್ವರ ಜಾತ್ರೆ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿರುವಾಗ ಮಾರ್ಗ ಮಧ್ಯೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಜಿಲ್ಲೆಯ ಶಹಾಪುರ ತಾಲೂಕಿನ ರಬನಳ್ಳಿ ಗ್ರಾಮದ ಹತ್ತಿರ ನಡೆದಿದೆ.
ಬಸವರಾಜ ತಂದೆ ಸುಭಾಶ (25) ಮತ್ತು ಅಯ್ಯಪ್ಪ ತಂದೆ ಮಡಿವಾಳಪ್ಪ (24) ಮೃತಪಟ್ಟ ದುರ್ದೈವಿಗಳು. ಮೃತರು ಮೂಲತಃ ಜೇವರ್ಗಿ ತಾಲೂಕಿನ ಅರಳಗುಂಡಿಗಿ ಗ್ರಾಮದವರೆಂದು ತಿಳಿದು ಬಂದಿದೆ.
ಬೈಕ್ ಸವಾರರು ಯಾದಗಿರಿಯ ಮೈಲಾಪುರ ಜಾತ್ರೆ ಮುಗಿಸಿಕೊಂಡು ಶಹಾಪುರ-ಸಿಂದಗಿ ಮಾರ್ಗವಾಗಿ ಅರಳಗುಂಡಿಗಿ ತೆರಳುವವರಾಗಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‍ಐ ಕೃಷ್ಣಾ ಸುಬೇದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.