ಕನಕನಗರದಲ್ಲಿ ಕಳಪೆ ಕಾಮಗಾರಿ ಕರವೇ ಆರೋಪ
ಕನಕನಗರದಲ್ಲಿ ಕಳಪೆ ಕಾಮಗಾರಿ ಕರವೇ ಆರೋಪ
ಶಹಾಪುರಃ ಹೈದ್ರಾಬಾದ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಕೈಗೆತ್ತಿಕೊಳ್ಳಲಾದ 2017-18ನೇಯ ಸಾಲಿನ 25 ಲಕ್ಷ.ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿ ಕಳಪೆಯಿಂದ ಸಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಭೀಮು ಶಖಾಪುರ ಆರೋಪಿಸಿದ್ದಾರೆ.
ಪತ್ರಿಕೆಗೆ ಹೇಳಿಕೆಯೊಂದನ್ನು ನೀಡಿ ಸರ್ಕಾರ ನಗರ ಅಭಿವೃದ್ದಿಗೆಂದು ಕೋಟಿಗಟ್ಟಲೆ ಅನುದಾನ ಕಲ್ಪಿಸಿದ್ದು, ಪಟ್ಟಣದ ಕನಕನಗರದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಆದರೆ ಸದರಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಅಲ್ಲದೆ ಕಾಮಗಾರಿಯನ್ನು ಅಪೂರ್ಣಗೊಳಿಸಿ ಚರಂಡಿ ಪೂರ್ಣಗೊಳಿಸದೆ ಅಧಿಕಾರಿಗಳು ಹಾಗೇ ಬಿಟ್ಟಿದ್ದು, ಈ ಕಾಮಗಾರಿಯ ಬಿಲ್‍ನ್ನು ಗುತ್ತಿಗೆದಾರರ ಜೊತೆಗೆ ಅಧಿಕಾರಿಗಳು ಶಾಮೀಲಾಗಿ ಬಿಲ್ ಮಾಡಲಾಗುತ್ತಿದೆ. ಕಾರಣ ಮೇಲಧಿಕಾರಿಗಳು ಕೂಡಲೇ ಈ ಕಾಮಗಾರಿ ಬಿಲ್ ತಡೆಯಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ ಅಂದಾಜು ಪತ್ರಿಕೆ ಅನುಸಾರ ಕಾಮಗಾರಿ ನಡೆಯಬೇಖು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಪಂ ಕಚೇರಿ ಎದುರು ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.