ವಿದ್ಯುತ್ ಸ್ಪರ್ಶ ಎಮ್ಮೆಗಳ ದಾರುಣ ಸಾವು
ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ 5 ಎಮ್ಮೆಗಳ ಸಾವು
ಯಾದಗಿರಿ, ಶಹಾಪುರಃ ಗದ್ದೆಯೊಂದರಲ್ಲಿ ಮೇಯುತ್ತಾ ತೆರಳಿದ್ದ ಎಮ್ಮೆಗಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ರೈತನೋರ್ವನಿಗೆ ಸೇರಿದ ಐದು ಎಮ್ಮೆಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿ ಹೋತಪೇಠ ತಾಂಡಾದ ಹೊರವಲಯದಲ್ಲಿ ರವಿವಾರ ನಡೆದಿದೆ.
ಘಟನಾ ಸ್ಥಳಕ್ಕೆ ಪೊಳೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪರಕರಣ ದಾಖಲಾಗಿದೆ. ರೈತ ಸುಭಾಶ ತಂದೆ ತೇಜುನಾಯಕ ಎಂಬುವರಿಗೆ ಸೇರಿದ್ದ ಎಮ್ಮೆಗಳು ಇವಾಗಿದ್ದು, ಏಕಕಾಲಕ್ಕೆ ಮೃತಪಟ್ಟ ಎಮ್ಮೆಗಳಿಂದ ಮಾಲೀಕ ಕಂಗಾಲಾಗಿದ್ದೇನೆ.
ವಿದ್ಯುತ್ ತಂತಿಯಲ್ಲಿ ವಿದ್ಯುತ್ ಸರಬರಾಜು ಆಗಿದ್ದು ಅದೃಷ್ಠವಶಾತ್ ಎಮ್ಮೆಗಳು ವಿದ್ಯುತ್ ತಂತಿಗೆ ಸ್ಪರ್ಶದಿಂದ ಎಮ್ಮೆಗಳು ಮೃತಪಟ್ಟಿವೆ. ಮನುಷ್ಯರು ದನಕರುಗಳ ಕಾಯುವವರು ವಿದ್ಯುತ್ ತಂತಿ ತಗುಲಿದ್ದಲ್ಲಿ ಇನ್ನೂ ಅಪಾಯಕಾರಿ ಘಟನೆ ನಡೆಯಲಿತ್ತು.
ಅಷ್ಟರಲ್ಲಿ ಎಮ್ಮೆಗಳು ತಮ್ಮ ಜೀವ ನೀಡಿ ತಮ್ಮ ಮಾಲೀಕ ಮತ್ತು ಕಾಯವವರನ್ನು ಉಳಿಸಿದಂತಾಗಿದೆ.
ಜೆಸ್ಕಾಂ ಇಲಾಖೆಯವರು ಇತ್ತ ಗಮನಹರಿಸಬೇಕು. ಕೆಳಗಡೆ ಬಿದ್ದ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿರುವ ಕಾರಣ ಇಂತಹ ಅವಘಡಗಳು ಸಂಭವಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಮ್ಮೆ ಮಾಲೀಕ ರೈತನಿಗೆ ಇದರಿಂದ ಸಾಕಷ್ಟು ನಷ್ಟವಾಗಿದ್ದು, ನಿತ್ಯ ಎಮ್ಮೆಗಳು ಜೀವನೋಪಾಯಕ್ಕೆ ಸಹಕಾರಿಯಾಗಿದ್ದವು, ಏಕಕಾಲಕ್ಕೆ ಐದು ಎಮ್ಮೆಗಳ ಮೃತಪಟ್ಟ ಹಿನ್ನೆಲೆಯಲ್ಲಿ ರೈತ ಸುಭಾಶ ಕಂಗಾಲಾಗಿದ್ದಾನೆ.
ಕಾರಣ ಕೂಡಲೇ ತಾಲೂಕು ಆಡಳಿತ ರೈತನಿಗಾದ ನಷ್ಟ ಭರಿಸುವ ಮೂಲಕ ಮತ್ತೆ ಎಮ್ಮೆಗಳನ್ನು ಖರೀದಿಗೆ ಪರಿಹಾರ ಕಲ್ಪಿಸಬೇಕೆಂದು ತಾಂಡಾದ ನಾಗರಿಕರು ಮನವಿ ಮಾಡಿದ್ದಾರೆ.




