ಪ್ರಮುಖ ಸುದ್ದಿ
ಕಲಬುರಗಿ : ಬೈಕಿಗೆ ಸರ್ಕಾರಿ ಬಸ್ ಡಿಕ್ಕಿ, ತಾಯಿ-ಮಗ ಸಾವು!
ಕಲಬುರಗಿ : ತಾಲೂಕಿನ ಕುರಿಕೋಟಾ ಗ್ರಾಮದ ಸಮೀಪ ಬೈಕ್‌ಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ತಾಯಿ, ಮಗ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ನಡೆದಿದೆ.
ಕಲಬುರಗಿಯಿಂದ ಸ್ವಗ್ರಾಮ ಆಳಂದ ತಾಲೂಕಿನ ಶ್ರೀಚಂದ ಗ್ರಾಮಕ್ಕೆ ಬೈಕ್ ನಲ್ಲಿ ಹೊರಟಿದ್ದ ತಾಯಿ ತುಳಜಮ್ಮ (50) ಮಗ ಸಂತೋಷ್ (25) ಸ್ಥಳದಲ್ಲೇ ಸಾವಿಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಮಹಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ಪೊಲೀಸರ ತನಿಖೆಯಿಂದಾಗಿ ತಿಳಿಯಬೇಕಿದೆ.