ಪ್ರಮುಖ ಸುದ್ದಿ
ರಸ್ತೆ ಅಪಘಾತ ಅತ್ತೆ – ಸೊಸೆ ಸಾವು
ಯಾದಗಿರಿಃ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅತ್ತೆ-ಸೊಸೆ ಸಾವನ್ನಪ್ಪಿದ ಘಟನೆ ಸೈದಾಪುರ ಸಮೀಪದ ನೀಲಹಳ್ಳಿ ಗೇಟ್ ಬಳಿ ನಡೆದಿದೆ.
ಮಹಾದೇವಮ್ಮ (50) ಮತ್ತು ಸೊಸೆ ಪ್ರಿಯಾ (25) ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೆ ಕಾರಿನೊಳಗಿದ್ದ ಮಹೇಂದ್ರ ಮತ್ತು ಲೋಕೇಶ ಎಂಬುವರು ತೀವ್ರಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಲಾಡ್ಲಾಪುರ ಗ್ರಾಮ ನಿವಾಸಿಗಳಾಗಿದ್ದು, ಸ್ವಗ್ರಾಮ ಲಾಡ್ಲಾಪುರ ದಿಂದ ಬೆಂಗಳೂರಿಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.