ಪ್ರಮುಖ ಸುದ್ದಿ
ಎಚ್.ವಿಶ್ವನಾಥರಿಂದ ವಿವರಣೆ ಪಡೆಯುವೆ- ಕಟೀಲ್
ಎಚ್.ವಿಶ್ವನಾಥ ಅವರಿಂದ ವಿವರಣೆ ಪಡೆಯುವೆ- ಕಟೀಲ್
ಕಲಬುರ್ಗಿಃ ಟುಪ್ಪು ಸುಲ್ತಾನ ಕುರಿತು ಎಚ್.ವಿಶ್ವನಾಥ ಹೇಳಿಕೆ ನೀಡಿರುವ ಬಗ್ಗೆ ವಿವರಣೆ ಪಡೆಯುವೆ. ಆದರೆ ಬಿಜೆಪಿ ಟಿಪ್ಪು ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಹೇಳಿದರು.
ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ ಅವರು, ಮೊದಲಿಂದಲೂ ಬಿಜೆಪಿ ಟಿಪ್ಪು ಆಡಳಿತ ವೇಳೆ ನಡೆಸಿದ ಹಲವು ಕೃತ್ಯಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.
ಬಿಜೆಪಿಯದ್ದು ಸ್ಪಷ್ಟ ನಿಲುವಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೌದು ಎಚ್.ವಿಶ್ವನಾಥ ಅವರು ಬಿಜೆಪಿ ಗೆ ಬಂದಿದ್ದಾರೆ. ಅದ್ಯಾವ ಕಾರಣಕ್ಕೆ ಟಿಪ್ಪು ಪರ ಮಾತಾಡಿದ್ದಾರೋ ಗೊತ್ತಿಲ್ಲ. ಅವರಿಂದ ವಿವರಣೆ ಪಡೆಯಲಾಗುವದು ಎಂದರು.