ಪ್ರಮುಖ ಸುದ್ದಿ
ಕಲಬುರಗಿ : ಹತ್ಯೆ ಆರೋಪಿ ನೇಣಿಗೆ ಶರಣು!
ಕಲಬುರಗಿ : ಅಫಜಲಪುರ ತಾಲೂಕಿನ ನೀಲೂರು ಸಮೀಪ ನಿನ್ನೆ ಲಕ್ಷ್ಮೀಬಾಯಿ ಹೂಗಾರ್(40) ಎಂಬ ಮಹಿಳೆಯ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿತ್ತು. ಗ್ರಾಮದ ಹೊರವಲಯದಲ್ಲಿ ಮಹಿಳೆಯ ನಿಗೂಢ ಕೊಲೆಯಾಗಿದ್ದು ಪೊಲೀಸರು ಪ್ರಕರಣ ಬೇಧಿಸಲು ಮುಂದಾಗಿದ್ದರು. ಮಹಿಳೆಯ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ವಿಚಾರ ಪೊಲೀಸರಿಗೆ ತಿಳಿದಿದ್ದು, ಬಂದಿಸುತ್ತಾರೆಂಬ ಭೀತಿಗೊಳಗಾದ ಕೊಲೆ ಆರೋಪಿ ಫೋಸಯ್ಯ ಕಲ್ಯಾಣಕರ್ ನೇಣಿಗೆ ಶರಣಾದ ಘಟನೆ ಸ್ಟೇಷನ್ ಗಾಣಗಾಪುರದಲ್ಲಿ ನಡೆದಿದೆ.