ಆಸಿಡ್ ಕುಡಿಸಿ ವ್ಯಕ್ತಿಯೋರ್ವನ ಕೊಲೆ
ಆಸಿಡ್ ಕುಡಿಸಿ ವ್ಯಕ್ತಿಯೋರ್ವನ ಕೊಲೆ
ಕಲ್ಬುರ್ಗಿಃ ದೇವರ ದರ್ಶನ ಪಡೆದು ಬೈಕ್ ಮೇಲೆಯೇ ಮರಳಿ ಕಲ್ಬುರ್ಗಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಕಲ್ಬುರ್ಗಿ ನಿವಾಸಿ ವಿಜಯಕುಮಾರ (38) ಎಂಬಾತನ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಪಕ್ಕದ ಜಮೀನಿಗೆ ಎಳೆದೊಯ್ದು ಆತನಲ್ಲಿದ್ದ ಹಣ, ಚಿನ್ನಾಭರಣ ಕಸಿದುಕೊಂಡು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಲ್ಲದೆ ಒತ್ತಾಯ ಪೂರ್ವಕವಾಗಿ ಭಯ ಹುಟ್ಟಿಸಿ ಯಾಸಿಡ್ ಕುಡಿಸಿದ ದುಷ್ಕರ್ಮಿಗಳು, ಅಲ್ಲಿಂದ ಕಾಲ್ಕಿತ್ತಿರುವ ಘಟನೆ ವಾಡಿ ಪಟ್ಟಣ ವ್ಯಾಪ್ತಿಯ ರಾವೂರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.
ದುಷ್ಕರ್ಮಿಗಳ ರಾಡ್ ಹೊಡೆತಕ್ಕೆ ಭಯಗೊಂಡು ಯಾಸಿಡ್ ಸೇವಿಸಿದ್ದ ವ್ಯಕ್ತಿ ದುಷ್ಕರ್ಮಿಗಳು ಪರಾರಿಯಾದ ನಂತರ ತೂರಾಡುತ್ತಾ, ರಕ್ತ ಕಾರುತ್ತಾ ಹೆದ್ದಾರಿಗೆ ಬಂದಿದ್ದು, ಸ್ಥಳದಲಿದ್ದ ಜನ ಗಾಬರಿಗೊಂಡು 108 ಗೆ ಕಾಲ್ ಮಾಡಿ ಅಂಬ್ಯೂಲೆನ್ಸ್ ತರಿಸಿ ಆತನನ್ನ ಆಸ್ಪತ್ರೆಗೆ ಕಳುಹಿಸುವ ಮೂಲಕ ಅಲ್ಲಿನ ನಾಗರಿಕರು ಮಾನವೀಯತೆ ಮೆರೆದಿದ್ದಾರೆ.
ಆದರೆ, ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ರಕ್ತ ಕಾರಿ ನಿತ್ರಾಣಕ್ಕೆ ಬಂದಿದ್ದ ವಿಜಯಕುಮಾರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ.
ಸ್ಥಳಕ್ಕೆ ವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.