ಪ್ರಮುಖ ಸುದ್ದಿ
ಪಡ್ಡೆಗಳ ಹೃದಯಕ್ಕೆ ಮತ್ತೊಮ್ಮೆ ಶೂಟ್ ಮಾಡಿದ ಕಣ್ಸನ್ನೆ ಹುಡುಗಿ
ಪಡ್ಡೆಗಳ ಹೃದಯಕ್ಕೆ ಮತ್ತೊಮ್ಮೆ ಶೂಟ್ ಮಾಡಿದ ಕಣ್ಸನ್ನೆ ಹುಡುಗಿ
ವಿವಿ ಡೆಸ್ಕ್ಃ ಒರು ಅಡಾರ್ ಲವ್ ಸಿನಿಮಾ ಹಾಡಿನೊಂದಿಗೆ ತನ್ನ ಮಾದಕ ಕಣ್ಸನ್ನೆ ಬೀರುವ ಮೂಲಕ ರಾತ್ರೋ ರಾತ್ರಿ ಪ್ರಸಿದ್ಧಿ ಹೊಂದಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ ವಾರಿಯರ್ ಇದೀಗ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಬ್ಯೂಟಿ ಸೆಲೂನ್ ವೊಂದರಲ್ಲಿ ಮಾಸ್ಕ್ ಧರಿಸಿಕೊಂಡೇ ಕುಳಿತ ನಟಿ ಪ್ರಿಯಾ, ಎದುರಿನ ಮಿರರ್ ನೋಡುತ್ತಾ ಮಾಡಿರುವ ವಿಡಿಯೋದಲ್ಲಿ ಹುಬ್ಬು ಹಾರಿಸಿ ಮಾಸ್ಕ್ ಒಳಗೆ ನಗೆ ಬೀರಿ ಕಣ್ಣೊಡೆಯುವ ದೃಶ್ಯ ನೇರವಾಗಿ ಪಡ್ಡೆ ಹುಡುಗರ ಎದೆಗೆ ಶೂಟ್ ಮಾಡಿದಂತಾಗಿದೆ.
ಪ್ರಿಯಾ ತನ್ನ ಇನ್ಸಟ್ರಾಗ್ರಾಂನಲ್ಲಿ ಈ ವಿಡಿಯೋ ಅಪ್ ಲೋಡ್ ಮಾಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ನಟಿ ಪ್ರಿಯಾಳ ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಮಿಂಚುತಿದೆ.