ಪ್ರಮುಖ ಸುದ್ದಿವಿನಯ ವಿಶೇಷ

ನಟಿ ಹರಿಪ್ರಿಯಾ : ಇಳಕಲ್ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ವಿನಯ ಮುದನೂರ್

ಇಳಕಲ್ ಸೀರೆ ಉಟ್ಕೊಂಡು, ಮೊಣಕಾಲ ಗಂಟ ಎತ್ಕೊಂಡು ಏರಿ ಮೇಲೆ ಏರಿ ಬಂದ್ಲು ನಾರಿ ಬುಟ್ಟಿ ತುಂಬ ಪ್ರೀತಿ ತಂದ್ಲು ಗೌರಿ…

ಈ ಹಾಡು ಯಾರು ತಾನೇ ಕೇಳಿಲ್ಲ ಹೇಳಿ. ಈ ಹಾಡು ಅಷ್ಟೊಂದು ಫೇಮಸ್ ಆಗಲು ಕಾರಣವೇ ಇಳಕಲ್ ಸೀರೆ. ಹೌದು, ಅದುವೇ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣ. ಇಳಕಲ್ ಎಂಬ ಪಟ್ಟಣ ಇಳಕಲ್ ಸೀರಿಯಿಂದಲೇ ವಿಶ್ವಖ್ಯಾತಿ ಗಳಿಸಿದೆ, ಹೆಂಗಳೆಯರ ಹೃದಯದಲ್ಲಿ ಸ್ಥಾನ ಪಡೆದಿದೆ. ಇಳಕಲ್ ಸೀರೆ ಅದು ಕೇವಲ ಬಟ್ಟೆ ಆಗಿರದೆ ಮಹಿಳೆಯ ಹೃದಯ ಗೆಳತಿಯಾಗಿ ಪರಿಣಮಿಸಿದೆ. ಹಳ್ಳಿಗಾಡಿನ ಮಹಿಳೆಯಿಂದ ಹಿಡಿದು ನಗರ ಪ್ರದೇಶದ ಮಹಿಳೆಯವರೆಗೂ, ಸಾಮಾನ್ಯ ಮಹಿಳೆಯಿಂದ ಹಿಡಿದು ಸಿನೆಮಾ ನಟಿಯರವರೆಗೂ ಇಳಕಲ್ ಸೀರೆ ತನ್ನ ಸೆಳೆತವನ್ನು ಸಾಧಿಸಿದೆ.

ಹಬ್ಬ ಹರಿದಿನಗಳಲ್ಲಿ, ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಇಳಕಲ್ ಸೀರೆ ಧರಿಸಿ ಮಹಿಳೆಯರು ಮಿಂಚುವುದು ಸಹಜ. ಆದರೆ, ನಟಿ ಹರಿಪ್ರಿಯಾ ಇಂದು ಇಳಕಲ್ ಸೀರೆ ಧರಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಗಮನಸೆಳೆದಿದ್ದಾರೆ. ಸದ್ಯ ಇಳಕಲ್ ಸೀರೆ ತೊಟ್ಟಿರುವ ಹರಿಪ್ರಿಯಾ ಚಿತ್ರಗಳು ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಹೊಸ ಟ್ರೆಂಡ್ ಹುಟ್ಟು ಹಾಕಿದ್ದು ಇಳಕಲ್ ಸೀರೆಗೆ ಡಿಮ್ಯಾಂಡ್ ಸೃಷ್ಠಿಸಿದೆ.

ಇಳಕಲ್ ಸೀರೆ ಕೈಮಗ್ಗದಲ್ಲಿ ನೇಯಲು ಕನಿಷ್ಟ ಒಂದು ವಾರಕಾಲ ಬೇಕಾಗುತ್ತದೆ. ಉತ್ತಮ ಗುಣಮಟ್ಟದ ಇಳಕಲ್ ಸೀರೆಗಾಗಿ ಮನೆ ಮಂದಿಯೆಲ್ಲ ಹಗಲು ರಾತ್ರಿ ಶ್ರಮಿಸಬೇಕಾಗುತ್ತದೆ. ಗುಣಮಟ್ಟದಿಂದಲೇ ಇಳಕಲ್ ಸೀರೆ ತನ್ನದೇ ಆದ ಛಾಪು ಮೂಡಿಸಿದ್ದೇ ಅದಕ್ಕೆ ಸಾಕ್ಷಿ. ಸೆಲೆಬ್ರೆಟಿಗಳು ವಿವಿಧ ಅರೆಬರೆ ಧಿರಿಸುಗಳೊಂದಿಗೆ ಫೋಸು ನೀಡಿ ಕುಖ್ಯಾತಿಗಳಿಸುತ್ತಿರುವ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಇಳಕಲ್ ಸೀರೆ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ನಿಜಕ್ಕೂ ಶ್ಲಾಘನೀಯ.

Related Articles

Leave a Reply

Your email address will not be published. Required fields are marked *

Back to top button