ಪ್ರಮುಖ ಸುದ್ದಿ
ಹಿರಿಯ ವಕೀಲ ವೆಂಕನಗೌಡ ಹಾಲಬಾವಿ ನಿಧನ
ಶಹಾಪುರಃ ನಗರದ ಹಿರಿಯ ವಕೀಲರಾದ ಹಾಗೂ ಮಾಜಿ ಈಶಾನ್ಯ ಸಾರಿಗೆ ವಲಯ ಉಪಾದ್ಯಕ್ಷರೂ ಆಗಿದ್ದ ವೆಂಕನಗೌಡ ಪಾಟೀಲ ಹಾಲಬಾವಿ (78) ಅವರು ಸೋಮವಾರ ನಿಧನರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದ ಅವರು, ದಿ. ಮಾಜಿ ಶಾಸಕ ಶಿವಶೇಖರಪ್ಪಗೌಡ ಶಿರವಾಳ ಹಾಗೂ ದಿ. ಮಾಜಿ ಶಾಸಕ, ಸಚಿವರಾಗಿದ್ದ ಜನಪ್ರಿಯ ನಾಯಕರೂ ಆಗಿದ್ದ ಬಾಪೂಗೌಡ ದರ್ಶನಾಪುರ ಅವರ ಕಾಲದಲ್ಲೂ ರಾಜಕೀಯದಲ್ಲಿ ಸಕ್ರೀಯರಾಗಿ ಭಾಗವಹಿಸಿದ್ದರು.
ವಕೀಲ ವೃತ್ತಿಯಲ್ಲಿ ಅಪಾರ ಸೇವೆ ಸಲ್ಲಿಸಿದ ಅವರು ವಯೋಸಹಜ ಬಳಕೆಯಲ್ಲಿ ಕಾಲವಾದರು.
ಮಂಗಳವಾರ ಸಂಜೆ 4-00 ಗಂಟೆಗೆ ಸ್ವಗ್ರಾಮ ಹೋತಪೇಟ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪಃ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಸೇರಿದಂತೆ ಸುರೇಂದ್ರ ಪಾಟೀಲ್ ಮಡ್ನಾಳ, ಮಲ್ಲಣ್ಣ ಮಡ್ಡಿ, ಚಂದ್ರಶೇಖರ ಆರಬೋಳ ಇತರರು ಸೂಚಿಸಿದ್ದಾರೆ.