ಪ್ರಮುಖ ಸುದ್ದಿ
ಮೋದಿ ಸರ್ಕಾರದ ದಿಟ್ಟ ಹೆಜ್ಜೆಗೆ ಅಭಿನಂದನೆ ಸಲ್ಲಿಸಿದ ಹಿರಿಯ ನಾಯಕ ಅಡ್ವಾಣಿ
370 ವಿಧಿ ಅನ್ವಯ ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ
ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು
ಸ್ವಾಗತಿಸಿದ್ದಾರೆ. ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿ ರಾಷ್ಟ್ರೀಯ ಏಕೀಕರಣವನ್ನು
ಬಲಪಡಿಸುವ ದಿಟ್ಟ ಹೆಜ್ಜೆ ಎಂದು ಕರೆದಿದ್ದು ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿ ಹಿಂತೆಗೆದುಕೊಳ್ಳುವುದು ಬಿಜೆಪಿಯ ಹಳೆಯ ನಿರ್ಧಾರ
ಆಗಿದ್ದು ಈಗ ಸಾಕಾರಗೊಂಡಿದ್ದು ನನಗೆ ಸಂತೋಷ ತಂದಿದೆ ಎಂದು ತಿಳಿಸಿರುವ ಅಡ್ವಾಣಿ
ಅವರು ಕಾಶ್ಮೀರದಲ್ಲಿ ಶಾಂತಿ ನೆಲಸಲಿ ಎಂದು ಆಶಿಸಿದ್ದಾರೆ.