ಪ್ರಮುಖ ಸುದ್ದಿ

ವಕೀಲರಲ್ಲಿ ಸಕರಾತ್ಮಕ ಚಿಂತನೆ ಅಗತ್ಯ-ನ್ಯಾ.ಬಡಿಗೇರ

ಶಹಾಪುರದಲ್ಲಿ ವಕೀಲರ ದಿನಾಚರಣೆ

ಯಾದಗಿರಿ, ಶಹಾಪುರಃ ವಕೀಲರು ಸಕರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ನಿತ್ಯವು ಹೊಸತನ ಹುಡಕುವ ಮೂಲಕ ವೃತ್ತಿ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂದು ಹಿರಿಯ ಶ್ರೇಣಿ ನ್ಯಾಯಧೀಶ ಪ್ರಭು ಎನ್.ಬಡಿಗೇರ ಹೇಳಿದರು.

ನಗರ ನ್ಯಾಯಾಲದ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಬಂಧಿಸಿದ ವಿಷಯಗಳ ಬಗ್ಗೆ ನಿರಂತರ ಅಭ್ಯಾಸ, ಚರ್ಚೆ ಹೆಚ್ಚು ಹೆಚ್ಚು ಕಲಿಕೆ ಮೂಲಕ ಬೌದ್ಧಿಕ ಮಟ್ಟ ಸುಧಾರಿಸಿಕೊಂಡು ಸಾರ್ವಜನಿಕ ಜೀವನದಲ್ಲಿ ವಕೀಲರೆಂದರೆ ಹೀಗಿರಬೇಕೆಂಬಂತೆ ವೃತ್ತಿ ಜೀವನ ನಡೆಸಬೇಕು.
ವಕೀಳರು ವೃತ್ತಿ ಘನತೆ ಕಾಪಾಡಿಕೊಳ್ಳಬೇಕು. ಕಿರಿಯ ವಕೀಲರು ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.

ಸಮಾಜದಲ್ಲಿ ವೈದ್ಯರು, ವಕೀಲರೆಂದರೆ ಪ್ರಸ್ತುತ ದಿನಗಳಲ್ಲಿ ಅಪ ನಂಬಿಕೆ ಮೂಡುವಂತ ವಾತಾವರಣ ಸೃಷ್ಟಿಯಾಗಿದೆ. ಬೆರಳಣಿಕೆಯಷ್ಟು ಜನ ಮಾಡಿದ ಅಲ್ಲದ ಕೆಲಸದಿಂದ ಇಡಿ ವಕೀಲ ಸಮುದಾಯಕ್ಕೆ ಕೆಟ್ಟ ಹೆಸರು ಬರಲಿದೆ. ಹೀಗಾಗಿ ವಕೀಲರಾದವರು ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸಬೇಕು.

ಸಾರ್ವಜನಿಕ ಜೀವನದಲ್ಲಿ ವಕೀಲರ ಮಾತಿಗೆ ಜಾಸ್ತಿ ಮನ್ನಣೆ ಇದೆ, ಇರುವ ಗೌರವವನ್ನು ಉಳಿಸಿಕೊಳ್ಳಬೇಕು. ಕೇವಲ ಹಣದ ಆಸೆಗೆ ಕಾನೂನಿಗೆ ಸವಾಲೊಡ್ಡುವಂತೆ ಅಡ್ಡ ದಾರಿ ಮೂಲಕ ಕೆಲಸ ಮಾಡಿಕೊಡುವಂತೆ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ಹಿರಿಯ ವಕೀಲ ಭಾಸ್ಕರ್‍ರಾವ ಮಾತನಾಡಿ, ವಕೀಲರ ಜೀವನ ಶೈಲಿ, ವೃತ್ತಿ ಎನ್ನುವದು ಸಮಾಜದ ಗೌರವ ತರುವ ವೃತ್ತಿಯಾಗಿದೆ. ಈ ವೃತ್ತಿ ಸಮಾಜ ಮುಖಿಯಾಗಿ ಕೆಲಸ ಮಾಡಲು ಪ್ರಮುಖ ಪಾತ್ರವಹಿಸುತ್ತದೆ.
ನಾವು ಆಚರಿಸುವ ಧರ್ಮವನ್ನು ಹೇಗೆ ನಾವುಗಳು ಗೌರವಿಸುತ್ತೇವೆಯೋ ಅದರ ಎರಡು ಪಟ್ಟು ವೃತ್ತಿಯನ್ನು ಗೌರವಿಸಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀನಿವಾಸ ಕುಲ್ಕರ್ಣಿ, ಚಂದ್ರಶೇಖರ ಲಿಂಗದಳ್ಳಿ, ಹಣಮೇಗೌಡ ಮರಕಲ್, ಸಿ.ಟಿ.ದೇಸಾಯಿ, ಶಾಂತಗೌಡ ಪಾಟೀಲ್, ವಿಶ್ವನಾಥರಡ್ಡಿ ಸಾವೂರ, ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂತೋಷ ಸತ್ಯಂಪೇಟೆ ನಿರೂಪಿಸಿದರು.ಎಂ.ಎನ್.ಪೂಜಾರಿ ಸ್ವಾಗತಿಸಿದರು. ವಾಸುದೇವ ಕಟ್ಟಿಮನಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button