ಕೊರೊನಾ ಮುಸ್ಲಿಂರ ತಲೆಗೆ ಕಟ್ಟುವದು ಸರಿಯಲ್ಲ –ದೇವೇಗೌಡ ಸಿಎಂಗೆ ಬರೆದರು ಪತ್ರ
ಬೆಂಗಳೂರಃ ಕೊರೊನಾ ಸೋಂಕು ಎಲ್ಲಡೆ ಹರಡುತ್ತಿದ್ದು, ದೆಹಲಿಯ ಮಸೀದಿವೊಂದರಲ್ಲಿ ಮುಸ್ಲಿಂ ಸಮುದಾಯ ಸಭೆ ನಡೆಸಿರುವ ಕಾರಣದಿಂದ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂರ ವಿರುದ್ಧ ಕೊರೊನಾ ಅಸ್ತ್ರ ಬಳಸಲಾಗುತ್ತಿದೆ. ಕೊರೊನಾ ರೋಗ ಹರಡುವಿಕೆಯಿಂದ ದೇಶ ತತ್ತರಿಸಿದೆ. ದೆಹಲಿ ಘಟನೆಯೊಂದು ಇಟ್ಕೊಂಡು ಇಡಿ ಮುಸ್ಲಿಂ ಸಮುದಾಯವೇ ಕೊರೊನಾ ಹರಡಲು ಕಾರಣಿಭೂತರಾಗಿದ್ದಾರೆ ಎನ್ನುವದು ತಪ್ಪು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೊರೊನಾ ಸೋಂಕನ್ನು ಒಂದೇ ಸಮುದಾಯದ ತಲೆಗೆ ಕಟ್ಟುವ ಹುನ್ನಾರ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಕಿಲಿಗೇಡಿಗಳು ಮಾಡುತ್ತಿರುವ ತಪ್ಪಿನಿಂದಾಗಿ ಕೊರೊನಾ ಸೋಂಕು ಹರಡಲು ಇಡಿ ಸಮುದಾಯವೇ ಕಾರಣ ಎಂದು ಬಿಂಬಿಸುವದು ದುರದೃಷ್ಟಕರ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ ಕೊರೊನಾ ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿರುವದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪ್ಯಾರಾಮೆಡಿಕಲ್ ಸಿಬ್ಬಂದಿಯವರ ಸೇವೆ ಶ್ಲಾಘನೀಯ. ಅವರು ನೀಡುತ್ತಿರುವ ವೈದ್ಯಕೀಯ ಸೇವೆ ಅನನ್ನಯ. ಇಂತವರ ಮೇಲೆ ಹಲ್ಲೆ ಮಾಡುವವರ ವಿರುದ್ಧವು ಕ್ರಮಕೈಗೊಳ್ಳಬೇಕೆಂದು ಪತ್ರದ ಮುಖೇನ ತಿಳಿಸಿದ್ದಾರೆ.
ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರು, ಆಯಾ ಜಿಲ್ಲೆಯ ರೈತರ ಹೊಲ, ಗದ್ದೆ, ತೋಟಗಳಿಗೆ ತೆರಳಿ, ನಗರದು ರೂಪದಲ್ಲೇ ಹಣವನ್ನು ಪಾವತಿಸಿ ರೈತರು ಬೆಳೆದಿರುವ ಹಣ್ಣು, ಹಂಪಲು ಮತ್ತು ತರಕಾರಿ ಕೊಳ್ಳಲು ಜಿಲ್ಲಾಡಳಿದ ಮೂಲಕ ವ್ಯವಸ್ಥೆ ಕಲ್ಪಿಸಬೇಕು. ರೈತರಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕು.
-ಎಚ್.ಡಿ.ದೇವೇಗೌಡ. ಮಾಜಿ ಪ್ರಧಾನಿ. ಭಾರತ.