ಪರಿಣಾಮಕಾರಿ ತೀರ್ಪು ಬರಲು ವಕೀಲರ ಪಾತ್ರ ಮುಖ್ಯ-ನ್ಯಾ.ನಾಯಕ
ವರ್ಗಾವಣೆಃ ವಕೀಲರ ಸಂಘದಿಂದ ಗೌರವ ಸಮರ್ಪಣೆ
ಯಾದಗಿರಿಃ ವಕೀಲರು ನೂತನ ಆವಿಷ್ಕಾರಗಳನ್ನು ಬಳಸಿಕೊಂಡು ವೃತ್ತಿಯಲ್ಲಿ ಮೇಲ್ಪಂಕ್ತಿಯಾಗಬೇಕು. ಪ್ರತಿಯೊಬ್ಬರ ಯಶಸ್ಸು ಅವರ ಪರಿಶ್ರಮದಲ್ಲಿಯೇ ಅಡಗಿರುತ್ತದೆ ಎಂದು ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ.ಎಸ್.ನಾಯಕ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಾ ವಕೀಲರ ಸಂಘದ ವತಿಯಿಂದ ವರ್ಗಾವಣೆಗೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಎಸ್.ನಾಯಕ ಅವರಿಗೆ, ಶಹಾಪುರ ನಗರದ ವಕೀಲರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯಾಧೀಶರು ನ್ಯಾಯದಾನ ಮಾಡಬಹುದು. ಆದರೆ ಪರಿಣಾಮಕಾರಿಯಾಗಿ ತೀರ್ಪು ಬರುವುದರಲ್ಲಿ ವಕೀಲರ ಪಾತ್ರ ಬಹು ಮುಖ್ಯವಾಗಿದೆ. ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ ಸರಿಯಾದ ಕ್ರಮ ಸಕರಾತ್ಮಕ ಆಲೋಚನೆ ಅಗತ್ಯ.
ವಕೀಲರ ಸಂಘದ ಪದಾಧಿಕಾರಿಗಳು ಉತ್ತಮ ಸದುದ್ದೇಶ ಹೊಂದಿದ್ದಾರೆ ಎಂಬುವುದಕ್ಕೆ ಇಲ್ಲಿನ ವಕೀಲರ ಕಾರ್ಯಾಲಯ ಉತ್ಕøಷ್ಠ ವ್ಯವಸ್ಥೆ ಹೊಂದಿರುವುದು ಸಾಕ್ಷಿ ಮತ್ತು ಸಂತೋಷವೆನಿಸುತ್ತದೆ ಎಂದರು.
ವೇದಿಕೆ ಮೇಲೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಣಮಂತರಾವ್ ಕುಲ್ಕರ್ಣಿ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್‍ಫ್ರೈಡ್, ಸರ್ಕಾರಿ ಸಹಾಯಕ ಅಭಿಯೋಜಕ ಗುರುಲಿಂಗಪ್ಪ ತೇಲಿ, ಸಂತೋಷ ಸತ್ಯಂಪೇಟ ಉಪಸ್ಥಿತರಿದ್ದರು.
ಎಮ್.ಎನ್.ಪೂಜಾರಿ, ಆರ್.ಎನ್.ದೇಶಪಾಂಡೆ, ಶಾಂತಗೌಡ ಪಾಟೀಲ, ಟಿ.ಗೋಪಾಲ, ಯೂಸೂಫ್ ಸಿದ್ದಕಿ, ಸಿದ್ದು ಫಸ್ಪೂಲ, ಎಮ್.ಡಿ.ಪಾಟೀಲ, ಶರಬಣ್ಣ ರಸ್ತಾಪುರ, ಬಸಮ್ಮ.ಎಂ.ರಾಂಪುರೆ, ಸಂತೋಷ ದೇಶಮುಖ, ಮರೆಪ್ಪ ಹೊಸ್ಮನಿ, ಭೀಮರಾಯ ಮೂಲಿಮನಿ ಇತರರಿದ್ದರು.