ಬಜೆಟ್ನಲ್ಲಿ ವಕೀಲ ಸಮುದಾಯ ಕಡೆಗಣನೆ ಆಕ್ರೋಶ
ಕೋರ್ಟ್ ಕಲಾಪದಿಂದ ದೂರ-ವಕೀಲರಿಂದ ಆಕ್ರೋಶ
ಯಾದಗಿರಿ, ಶಹಾಪುರಃ ಮೊನ್ನೆ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡನೆಯಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಿರುವದನ್ನು ಖಂಡಿಸಿ ಇಲ್ಲಿನ ವಕೀಲರ ಸಂಘ ಮಂಗಳವಾರ ಕೋರ್ಟ್ ಕಲಾಪದಲ್ಲಿ ಭಾಗವಹಿಸದೆ ಹೊರಗುಳಿಯುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಶೀಲ ಕಚೇರಿಗೆ ತೆರಳಿ ತಹಶೀಲ್ದಾರ ಸಂಗಮೇಶ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ವಕೀಲ ಸಮೂಹಕ್ಕೆ ಯಆವುದೇ ಅನುದಾನ ಕಲ್ಪಿಸಿರುವದಿಲ್ಲ. ಅಲ್ಲದೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಕೋರಲಾಗಿತ್ತುಆ. ಈ ಕುರಿತು ಸರ್ಕಾರ ಯಾವುದೇ ಚಕಾರ ಎತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಸಮ್ಮಿಶ್ರ ಸರ್ಕಾರ ವಕೀಲರ ಸಮುದಾಯಕ್ಕೆ ಸೂಕ್ತ ಅನುದಾನ ಕಲ್ಪಿಸಬೇಕು. ಅನ್ಯಾಯಕ್ಕೊಳಗಾದ ನಾಗರಿಕರ ಪರವಾಗಿ ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ ದೊರಕಿಸಿ ಕೊಡುತ್ತೇವೆ. ದೇಶದ ಕಾನೂನು ಸಮರ್ಪಕವಾಗಿ ಜನರ ತಿಳುವಳಿಕೆಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸುತ್ತೇವೆ. ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸೇವಾ ಮನೋಭಾವದಿಂದ ಮಾಡುತ್ತೇವೆ. ಸರ್ಕಾರ ವಕೀಲರ ಸಮುದಾಯ ಪರಿಗಣಿಸದೆ ಇರುವುದು ಸರಿಯಲ್ಲ.
ಸರ್ಕಾರದ ಎಲ್ಲಾ ಯೋಜನೆಗಳನ್ನು ಕಾನೂನಾತ್ಮಕವಾಗಿ ತಲುಪಿಸುವಲ್ಲಿ ಸಂವಿಧಾನಿಕ ಕ್ರಮಗಳನ್ನು ಜರುಗಿಸುವಲ್ಲಿ ವಿಶೇಷ ಪಾತ್ರವಹಿಸುತ್ತದೆ. ಸಮಾಜವನ್ನು ಶಾಂತಿಯುತವಾಗಿ ನಡೆಯುತ್ತಿರವದಕ್ಕೆ ವಕೀಲ ಕೊಡುಗೆ ಸಾಕಷ್ಟಿದೆ. ಹೀಗಾಗಿ ಸರ್ಕಾರ ವಕೀಲ ಸಮುದಾಯಕ್ಕೆ ಪ್ರತ್ಯೇಕ ಅನುದಾನ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಾಲೋಮನ್ ಆಲ್ಫ್ರೈಡ್, ವಕೀಲರಾದ ಅಮರೀಶ ದೇಸಾಯಿ, ಅರವಿಂದ ದೇಶಪಾಂಡೆ, ಸಿದ್ದಿಕಿ ವಕೀಲರು, ಶ್ರೀಮಂತ ಕಂಚಿ, ಸಂತೋಷ ದೇಸಾಯಿ ಸೇರಿದಂತೆ ಇತರರಿದ್ದರು.