ಯಾದಗಿರಿಯಲ್ಲಿ ಮತ್ತೊಂದು ಘಟನೆಃ ಹಾಡುಹಗಲೇ ಹಣ ದೋಚಿ ಪರಾರಿ
ಯಾದಗಿರಿಯಲ್ಲಿ ಹಾಡುಹಗಲೇ ಹಣ ದೋಚಿ ಪರಾರಿ
ಯಾದಗಿರಿ: ನಗರದಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆಗೆ ಅಂಗಡಿಗಳ ಶೆಟರ್ ಮುರಿದ ಕಳ್ಳತನ ನಡೆದ ಬೆನ್ನ ಹಿಂದೆಯೇ ಮಹಿಳೆಯೊಬ್ಬರು ಬ್ಯಾಂಕಿಗೆ ಹಣ ತುಂಬಲು ತೆರಳುತಿದ್ದಾಗ ಕಳ್ಳರು ಹಿಂಬಾಲಿಸಿ 1 ಲಕ್ಷ ರೂ.ಹೊಂದಿದ್ದ ಬ್ಯಾಗ್ ಕಸಿದು ಕೊಂಡು ಬೈಕ್ ಮೇಲೆ ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಹಾಡಹಗಲೇ ಕಳ್ಳರು ಮಹಿಳೆಯ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಅಂಗಡಿಲ ಕಳ್ಳತನ ನಡೆದದ್ದು ಮತ್ತೆ ಅದರ ಬೆನ್ನಲ್ಲೆ ನಗರದಲ್ಲಿ ಮಹಿಳೆ ಕೈಲಿದ್ದ ಬ್ಯಾಗ್ ಕಸಿದುಕೊಂಡ ಎಸ್ಕೇಪ್ ಆಗಿದ್ದು ಜನರಲ್ಲಿ ಭೀತು ಸೃಷ್ಟಿಸಿದೆ.
ಮುದ್ನಾಳ ಗ್ರಾಮದ ಬಸ್ಸಮ್ಮ ಎಂಬುವರು 1 ಲಕ್ಷ ರೂ. ಹಣ ತೆಗೆದುಕೊಙಡು ಬ್ಯಾಂಕ್ ಖಾತೆಗೆ ಜಮಾ ಮಾಡಲೆಂದು ತನ್ನ ಸೊಸೆಯೊಂದಿಗೆ ನಗರಕ್ಕೆ ಬಂದಿದ್ದರು ಎನ್ನಲಾಗಿದೆ.
ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಮೊದಲು ಸಮೀಪದ ಪೋಟೋ ಸ್ಟುಡಿಯೋಕ್ಕೆ ಹೋಗಿ ಫೋಟೊ ತೆಗೆಸಿಕೊಳ್ಳಲು ಕುಳಿತಿದ್ದರು. ಆದರೆ ಹಣದೊಂದಿಗೆ ಬಂದಿದ್ದ ಬಸ್ಸಮ್ಮ ಅವರ ಬಗ್ಗೆ ಮಾಹಿತಿ ಅರಿತಿದ್ದ ಇಬ್ಬರು ಕಳ್ಳರು, ಬೈಕ್ ಮೇಲೆ ಹಿಂಬಾಲಿಸಿದ್ದಾರೆ. ಫೋಟೊ ಸ್ಟುಡಿಯೋದೊಳಗೆ ಹೋಗುತ್ತಿದ್ದಂತೆ ಮಹಿಳೆಯನ್ನು ಬೆನ್ನು ಹತ್ತಿದ್ದ ಕಳ್ಳರು ಕೈಯಲ್ಲಿರುವ ಹಣದ ಬ್ಯಾಗ್ ಕಸಿದುಕೊಂಡು ಬೈಕ್ ಮೇಲೆ ಪರಾರಿಯಾಗಿದ್ದಾರೆ.
ಹಣ ಹಣ ಎಂದು ಮಹಿಳೆ ಕೂಗುವಷ್ಟರಲ್ಲಿ ಕಳ್ಳರು ಹಣದ ಬ್ಯಾಗಿನೊಂದಿಗೆ ಬೈಕಿನಲ್ಲಿ ನಾಪತ್ತೆಯಾಗಿದ್ದಾರೆ. ಇಂದು ಬೆಳಗಿನ ಜಾವ ನಗರದಲ್ಲಿನ 3 ಅಂಗಡಿಗಳು ಕಳ್ಳತನವಾದ ಘಟನೆ ನಡೆದಿತ್ತು,
ಪರಿಣಾಮ ಕಳ್ಳರ ಈ ನಿರ್ಭಿತಿಯ ಕಳ್ಳತನ ಕಂಡು ಯಾದಗಿರಿಯ ನಾಗರಿಕರು ಭೀತಿಗೊಳಗಾಗಿದ್ದಾರೆ. ಸೂಕ್ತ ರಕ್ಷಣೆ ನೀಡಬೇಕೆಂದು ಜನ ಆಗ್ರಹಿಸಿದ್ದು ಪೊಲೀಸರ ಭಯವಿಲ್ಲದ್ದಕ್ಕೆ ಇಂಥ ಘಟನೆಗಳು ನಡೆಯುತ್ತಿವೆ ಎಂದು ಪೊಲೀಸರ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಯಾದಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
Ottare yadgiri nagaradalli saamanyarige bhadrate illave illa,
police navaru kaanunu suvyavaste kaapaduvalli sampoorna vifala vaagiddare ennabahudu.
Adastu bega dorode korarannu ididu mahilege nyaya odagisabekendu namma manavi