ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ
ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ
ನವದೆಹಲಿಃ ಆಗಸ್ಟ್ 10 ರಂದೇ ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿರುವ ಸಮಯ ಮುಗಿದಿರುವ ಕಾರಣ, ರಾಜೀನಾಮೆ ನೀಡಲು ಮುಂದಾಗಿದ್ದ ಸೋನಿಯಾ ಗಾಂಧಿಯವರನ್ನು ಇಂದು ನಡೆದ CWC ಸಭೆಯಲ್ಲಿ ಅವರ ಕಾಂಗ್ರೆಸ್ ನಾಯಕರೆಲ್ಲರೂ ಸೋನಿಯಾ ಗಾಂಧಿಯವರ ಮನವೊಲಿಸಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ನಡೆದ ಸಭೆಯಲ್ಲಿ ಎರಡು ಬಣಗಳು ಸ್ರಷ್ಟಿಯಾಗಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಒಂದು ಬಣ ವಾದಿಸಿದರೆ, ಇನ್ನೂ ಕೆಲ ನಾಯಕರು ಗಾಂಧಿ ಕುಟುಂಬ ಬದಲಾಗಿ ಬೇರೆಯವರು ಪಕ್ಷಮುನ್ನಡೆಸಬೇಕೆಂದು ಪತ್ರ ಬರೆಯುವ ಮೂಲಕ ಹೊಸ ಅಧ್ಯಕ್ಷರ ಆಯ್ಕೆಗೆ ಚಾಲನೆ ಕೊಟ್ಟಿದ್ದರು.
ಈ ಕುರಿತು ಬೇಸರ ವ್ಯಕ್ತಪಡಿಸಿದ್ದ ರಾಹಲ್ ಗಾಂಧಿ, ಸಭೆಯಲ್ಲಿ ಕೆಲವರ ಹೆಸರು ಹೇಳದೆ ಬಿಜೆಪಿ ಸೂಚನೆ ಮೇರೆಗೆ ಇಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ನಡುವೆ ಗುಲಾಂನಬಿ ಆಜಾದ್ ನಾವ್ಯಾರು ಬಿಜೆಪಿ ನಾಯಕರ ಮಾತು ಕೇಳಿ ಗಾಂಧಿ ಕುಟುಂಬ ಬಿಟ್ಟು ಬೇರೆ ವ್ಯಕ್ತಿ ಅಧ್ಯಕ್ಷರಾಗಬೇಕೆಂದು ಹೇಳಿಲ್ಲ. ಪಕ್ಷದ ಬೆಳವಣಿಗೆ ಹಿತದ ಹಿನ್ನೆಲೆ ತಿಳಿಸಿದ್ದೇವೆ. ಬಿಜೆಪಿ ಅವರ ಮಾತು ಕೇಳಿ ವಿಷಯ ಪ್ರಸ್ತಾಪಿಸಿದ್ದರೆ ಸಾಕ್ಷಿಕರಿಸಿ ಈ ಕ್ಷಣ ನಾನು ಕಾಂಗ್ರೆಸ್ ಗೆ ರಾಜೀನಾಮೆ ನೀಡುವೆ ಎಂದು ಪ್ರತಿಕ್ರಿಯಿಸಿದ ಘಟನೆಯೂ ಜರುಗಿತು.
ಬರೋಬ್ಬರಿ 6-7 ತಾಸು ಸಭೆಯಲ್ಲಿ ಹಗ್ಗಜಗ್ಗಾಟ ನಡೆದು ಕೊನೆಗೆ ಬಿಜೆಪಿ ನಾಹಕರು ಆರೋಪಿಸುವಂತೆ ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆಯೇ..? ಕಾಂಗ್ರೆಸ್.? ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಹೀಗಾಗಿ ಅಂತಿಮವಾಗಿ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷ ರಾಗಿ ಮುಂದುವರೆಸಲಾಯಿತು. ಹಗ್ಗ ಹರಿಲಲ್ಲ ಕೋಲು ಮುರಿಲಿಲ್ಲ ಎಂಬಂಥೆ ಮತ್ತದೇ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಸಲಾಗಿದೆ.