ಅಂಗೈಯಲ್ಲಿ ಕೂದಲೇಕೆ ಬೆಳೆಯಲ್ಲ.. ಬೀರಬಲ್ಲ ನೀಡಿದ ಉತ್ತರವೇನು.?
ಬಾದಷಹ್ ರಿಗೆ ಕಾಡುತ್ತಿರುವ ಸಮಸ್ಯೆ ಪರಿಹರಿಸಿದ ಬೀರಬಲ್ಲ
ಮಲ್ಲಿಕಾರ್ಜುನ ಮುದನೂರ
ಅಕ್ಬರ ಮಹಾರಾಜರೊಮ್ಮೆ ಮೃಷ್ಠಾನ ಭೋಜನ ಸವಿದು ಸುಖದ ಸುಪ್ಪತ್ತಿಗೆಯಲ್ಲಿ ಕಾಳುಗಳನ್ನು ಮುಂದಕ್ಕೆ ಚಾಚಕಿ ಅಲುಗಾಡಿಸುತ್ತಾ ಮಲಗಿರುವಾಗ, ತಮ್ಮ ಅಂಗೈಯನ್ನು ಒಮ್ಮೆ ನೋಡಿಕೊಂಡು ಅರೆ..ಈ ಅಂಗೈಯಲ್ಲೇಕೆ ಕೂದಲಿಲ್ಲ ಎಂದು ಯೋಚನೆ ಹೊಳೆಯಿತಂತೆ. ಸಾಕಷ್ಟು ಯೋಚಿಸಲಾಗಿ ಯಾವುದೆ ಸಮರ್ಪಕ ಉತ್ತರ ದೊರೆಯದೇ ತಳಮಳಗೊಂಡರು.
ಕೊನೆಗೆ ಬೀರಬಲ್ಲನನ್ನು ಕರೆಯಲು ತಮ್ಮ ಸೇವಕನನ್ನು ಕಳುಹಿಸಿಕೊಟ್ಟರಂತೆ. ಆಗ ಬೀರಬಲ್ಲ ಅರಮನೆಗೆ ಆಗಮಿಸಿ ಹೇಳೇ ಮಹಾರಾಜರೇ ಕರೆಯಲು ಕಳುಹಿಸಿರುವಿರಿ ಎಂದು ಕೇಳುತ್ತಿದ್ದಂತೆ. ಅಕ್ಬರ ಮಹಾರಾಜರು ಎದ್ದು, ಸಧ್ಯ ಬೀರಬಲ್ಲ ನೀನು ಬಂದಿಯಲ್ಲ ಸಾಕು. ನನ್ನ ಸಮಸ್ಯ ಇನ್ನೇನು ಬಗೆ ಹರಿದಂತೆ ಎಂದರಂತೆ.
ಅರೆರರೆ ಮಹಾರಾಜರೇ ಏನಿದು ಇನ್ನೂ ಸಮಸ್ಯೆ ಏನು ಅಂತಲೇ ಹೇಳಿಲ್ಲ. ಹಾಗಲೇ ಬಗೆಹರಿಯಿತು ಎಂದರೆ, ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲೆದರಂತೆ ಹಾಗನಿಸುತ್ತಿದೆ ಎಂದು ನಸು ನಕ್ಕರಂತೆ.
ಅದು ಹಾಗಲ್ಲ ಬೀರಬಲ್ಲ.. ನನ್ನಲ್ಲಿ ಕಾಡುತ್ತಿರುವ ಪ್ರಶ್ನೆಗೆ ನಿನ್ನಲ್ಲಿ ಉತ್ತರ ಇದ್ದೇ ಇರುತ್ತದೆ ಎಂಬ ಬಲವಾದ ನಂಬಿಕೆ ನನ್ನಲಿದೆ ಅದಕ್ಕೆ ಮನಸ್ಸು ನಿನ್ನ ಕಂಡ ತಕ್ಷಣ ನಿರಮ್ಮಳತೆಗೆ ಜಾರಿತು ಅದಕ್ಕೆ ಹಾಗೇ ಹೇಳಿದ ಅಂದರಂತೆ.
ತಕ್ಷಣ ತನ್ನ ಅಂಗೈಯನ್ನು ನೋಡಿಕೊಳ್ಳುತ್ತಿರುವ ತನ್ನ ಬಾದಷಹರನ್ನು ನೋಡಿ ಬೀರಬಲ್ಲ..ಅರೆ ಹುಜೂರ್ ಹೇ ಕ್ಯಾ ಅಂಗೈಯನ್ನು ಕನ್ನಡಿಯಂತೆ ನೋಡಿಕೊಳ್ಳುತ್ತಿದ್ದೀರಿ. ನೀವು ಪರೀಕ್ಷಿಸಿಕೊಳ್ಳುತ್ತಿರುವದನ್ನು ನೋಡಿದರೆ, ನಿಮಗೆ ಜೋತಿಷ್ಯ ಶಾಸ್ತ್ರದ ಪರಿಚಯವಿದೆ ಎಂದು ನನಗೀಲೆ ಗೊತ್ತಾಘಿದ್ದು, ಎಲ್ಲಿ ನನಗೂ ನನ್ನ ಭವಿಷ್ಯ ಬಗ್ಗೆ ಹೇಳಿ ಎಂದು ತನ್ನ ಅಂಗೈ ಸಹ ಮುಂದೆ ಚಾಚಿದನಂತೆ.
ಅಕ್ಬರನಿಗೆ ಬೀರಬಲ್ ನ ವಿನೋದದ ಮಾತನ್ನು ಕೇಳಿ ನಗು ಬಂತು. ಬೀರಬಲ್ಲ ಅಕ್ಬರನ ಮುಖವನ್ನು ನೋಡುತ್ತಾ ಹೇಳುತ್ತಾನೆ. ಅಯ್ಯೋ ಮಹಾರಾಯ ಅದು ಬಿಡು ನನಗೊಂದು ಸಮಸ್ಯೆ ಕಾಡುತ್ತಿದೆ. ಪರಿಹಾರವನ್ನು ಕಂಡುಕೊಳ್ಳದೆ ಒದ್ದಾಡುತ್ತಿದ್ದೀನಿ.
ನೀನು ಈ ದಿನ ಬರ್ತೀಯೋ ಇಲ್ಲವೋ ಎಂದು ಗಾಬರಿಗೊಂಡಿದ್ದೆ ಎಂದು ನಿಟ್ಟುಸಿರು ಬಿಟ್ಟು..
ನೋಡು ಬೀರಬಲ್ಲ ನಮ್ಮ ಶರೀರದ ಮೇಲೆಲ್ಲಾ ಹೇಗೆ ಮೃದುವಾದ ಕೂದಲುಗಳು ಬೆಳೆದಿವೆ. ಆದರೆ ಅಂಗೈ ಮೇಲೇಕೆ ಒಂದೂ ಕೂದಲೂ ಬೆಳದಿಲ್ಲ.? ಇದೇ ಈಗ ನನ್ನ ಮೆದುಳನ್ನು ಕಾಡುತ್ತಿರುವ ಸಮಸ್ಯಯಾಗಿದೆ. ನಿನಗೇನಾದರೂ ಈ ಸಮಸ್ಯೆ ಬಗೆಹರಿಸುವ ಉಪಾಯವೇ ನಿನ್ನಲಿದೆಯೇ..?
ಆಗ ಬೀರಬಲ್ಲ ಏನು ಮಹಾರಾಜರೇ ನನ್ನನ್ನು ಪರೀಕ್ಷೆಸುತ್ತದ್ದಿರೇನು ವಿನೋದ ಪರೀಕ್ಷೆ ಮಾಡುತ್ತಿರುವಿರಾ..? ಇಲ್ಲಾ ಬೀರಬಲ್ಲ ನಿನ್ನನ್ನು ಖಂಡಿತ ಪರೀಕ್ಷೆ ಮಾಡುತ್ತಿಲ್ಲ. ನನಗೆ ಈ ಕುರಿತು ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮನದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.
ಆಗ ಬೀರಬಲ್ಲ ನಿಮ್ಮ ಅಂಗೈ ಸದಾ ಸರ್ವರಿಗೂ ಉಪಯೋಗಕ್ಕೆ ಬರುವ ಕೈ ತಾನೇ.? ಕಬ್ಬಿಣದಂತ ಕರಿಯ ವಸ್ತು ಸಹ ದಿನಂಪ್ರತಿ ಬಳಸುತ್ತಿದ್ದರೆ ಬೆಳ್ಳಗಾಗಿಬಿಡುವುದಂತೆ. ಅಲ್ಲದೆ ನಿಮ್ಮ ಅಂಗೈ ವಿದ್ವಾಂಸರಿಗೂ ಸಂಭಾವನೆಯ ರೂಪದಲ್ಲಿ ಗೌರವಿಸುತ್ತಿರುತ್ತದೆ. ಆದ್ದರಿಂದಲೇ ತಮ್ಮ ಅಂಗೈಗಳು ಬೆಳ್ಳಗೆ ಇವೆ. ಕೂದಲುಗಳ ಸಹ ಬೆಳೆದಿಲ್ಲ ಎಂದನಂತೆ.