ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಕೆ,ದುಬಾರಿಯಾಗಲಿದೆ ಬಿಯರ್ ಬೆಲೆ

(Beer Price) ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಸಿದ್ದು, ಮಂಗಳವಾರದಿಂದ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಮದ್ಯಗಳು ಲಭ್ಯವಾಗಿವೆ. ಪ್ರೀಮಿಯಂ ಮದ್ಯದ ಮೇಲೆ 400 ರಿಂದ 600 ರೂ.ವರೆಗೆ ದರ ಇಳಿಕೆಯಾಗಿದೆ. ಆದರೆ, ಬಿಯರ್ ಬೆಲೆ ಸದ್ಯದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರೀಮಿಯಂ ಸ್ಪ್ಯಾಬ್ ಮದ್ಯದ ದರ ದುಬಾರಿಯಾಗಿತ್ತು. ಈ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿತ್ತು. ಗಡಿ ಭಾಗದ ಜಿಲ್ಲೆಗಳ ಜನರು, ನೆರೆಯ ರಾಜ್ಯಗಳಿಗೆ ತೆರಳಿ ಖರೀದಿಸುತ್ತಿದ್ದರು. ಇದರಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗುತ್ತಿತ್ತು. ಮಾರಾಟ ಹೆಚ್ಚಿಸಿ ಆದಾಯ ಗಳಿಸುವ ಉದ್ದೇಶದಿಂದ ಸರ್ಕಾರ, ಹೆಚ್ಚುವರಿ ಅಬಕಾರಿ ಸುಂಕ (ಇಎಡಿ) ಪರಿಷ್ಕರಿಸಿ ಪ್ರೀಮಿಯಂ ಮದ್ಯದ ದರ ಇಳಿಸಿದೆ.
ಬಿಯರ್ ಬೆಲೆಯಲ್ಲಿ 10 ರಿಂದ 30ರೂ ಹೆಚ್ಚಳ ಸಾಧ್ಯತೆ:
ಬಿಯರ್ ಬೆಲೆ ಪ್ರತಿ ಬಾಟಲ್ ಗೆ ಸುಮಾರು 10 ರಿಂದ 30 ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಿಯರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಬೇಸಿಗೆಯ ತಾಪಮಾನದಲ್ಲಿನ ಏರಿಕೆ ಕೂಡ ಬಿಯರ್ ಬೇಡಿಕೆ ಹೆಚ್ಚಲು ಕಾರಣ ಎಂದು ಮೂಲಗಳು ತಿಳಿಸಿವೆ.