ಅಳಿಲು ಸೇವೆ ಎನ್ನುವದು ರೂಢಿಯಲ್ಲಿ ಬಂದಿದ್ಹೇಗೆ.? ಗೊತ್ತೆ.?
ದಿನಕ್ಕೊಂದು ಕಥೆ
ಅಳಿಲು ಸೇವೆ ನಾಮಾರ್ಥ ಏನೆಂದು ತಿಳಿಯಲು ಇದನ್ನೋದಿ
ಸೀತೆಯನ್ನು ಕದ್ದು ರಾವಣ ಲಂಕೆಯು ಅಶೋಕವನದಲ್ಲಿ ಇರಿಸಿದ್ದ, ಶ್ರೀರಾಮ ವಾನರ ಸೈನ್ಯದೊಂದಿಗೆ ಸೀತೆಯನ್ನು ಪತ್ತೆ ಹಚ್ಚಲು ಹೊರಟ. ಲಂಕೆ ತಲಪಲು ಸಮುದ್ರದಾಟಬೇಕಲ್ಲ. ಹನುಮಂತನ ನೇತೃತ್ವದಲ್ಲಿ ಎಲ್ಲ ಕೋತಿಗಳೂ ಸೇತುವೆ ಕಟ್ಟಲು ನೆರವಾದವು. ಕೋತಿಗಳೆಲ್ಲ “ಜೈ ಶ್ರೀ ರಾಮ” ಎನ್ನುತ್ತಲೇ ಕಲ್ಲು ಬಂಡೆಗಳನ್ನೆತ್ತಿಕೊಂಡು ಸಮುದ್ರಕ್ಕೆ ಹಾಕುವುದನ್ನು ಅಳಿಲುಗಳೆಲ್ಲ ಕಾಣುತ್ತಿದ್ದವು.
ಅಳಿಲುಗಳಿಗೂ ಶ್ರೀ ರಾಮನೆಂದರೆ ತುಂಬ ಗೌರವವಿತ್ತು. ರಾಮನಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ಅವುಗಳಿಗೂ ಬಯಕೆ ಮೂಡಿತು. ಒಂದು ದಿನ ಅವೆಲ್ಲ ತಮ್ಮ ಪೊಟರೆಗಳಿಂದ ಕೆಳಗಿಳಿದವು. ಸಮುದ್ರ ದಂಡೆಯತ್ತ ಸಾಗಿದವು. ಒಮ್ಮೆ ನೀರಿನಲ್ಲಿ ಮುಳುಗಿ ಪುನಃ ಬಂದು ಮರಳು ದಂಡೆಯಲ್ಲಿ ಯಥೇಚ್ಛ ಉರುಳಾಡಿದವು.
ಮೈಕೈಗೆಲ್ಲ ಮರಳು ಅಂಟಿಕೊಂಡಿತು. ಪುನಃ ಓಡೋಡಿ ಹೋಗಿ ನೀರಿನಲ್ಲಿ ಮುಳುಗಿ ಮರಳನ್ನು ಅಲ್ಲಿಗೆ ಹಾಕಿ ಬಂದವು. ಶ್ರೀ ರಾಮ ಬಂದು ಒಮ್ಮೆ ಸೇತುವೆ ನಿರ್ಮಾಣದ ಕೆಲಸ ನೋಡುವಾಗ ಅಳಿಲುಗಳೂ ಈ ರೀತಿಯಲ್ಲಿ ನೆರವಾಗುವುದನ್ನು ಕಂಡು ಪ್ರೀತಿಯಿಂದ ಅವುಗಳನ್ನೆತ್ತಿಕೊಂಡು ಮೈದಡವಿ ಮೂರು ಗೆರೆಗಳನ್ನೇ ಅವುಗಳ ಬೆನ್ನಿನಲ್ಲಿ ಎಳೆದು ಬಿಟ್ಟ.
ಅಳಿಲ ಸೇವೆ ಎಂಬ ವಿಶೇಷ ಶಬ್ದವೇ ಈ ರೀತಿಯ ಹೋರಾಟದಿಂದ ಸ್ಥಾಯಿಯಾಯಿತು.
ನೀತಿ :– ಮೈಗಳ್ಳತನದಿಂದ ಇರಬಾರದು ಅಳಿಲು ಸೇವೆಯನ್ನಾದರೂ ಮಾಡಿ ಪರಮಾತ್ಮನ ಕೃಪೆ ಪಡೆಯಲು ಪ್ರಯತ್ನಿಸಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.