ಪ್ರಮುಖ ಸುದ್ದಿ
ಪ್ರತಿಯೊಬ್ಬ ಭಾರತೀಯ ನೋಡಲೇಬೆಕಾದ ಚಿತ್ರ ಕಾಶ್ಮೀರ್ ಫೈಲ್ಸ್ – ಅಮಿರ್ ಖಾನ್
ಮಾನವೀಯತೆ ನಂಬುವವರ ಮನ ಮುಟ್ಟಿದ ಚಿತ್ರ
ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆ ಅಮೀರ್ ಖಾನ್ ಸಲಹೆ
ಪ್ರತಿಯೊಬ್ಬ ಭಾರತೀಯ ನೋಡಲೇಬೆಕಾದ ಚಿತ್ರ ಕಾಶ್ಮೀರ್ ಫೈಲ್ಸ್ – ಅಮಿರ್ ಖಾನ್
ದೆಹಲಿಃ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆ ಆದಂದಿನಿಂದ ಎಲ್ಲಡೆ ಚರ್ಚೆಯಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರತಿಯೊಬ್ಬ ಭಾರತೀಯನು ನೋಡಬೇಕಾದ ಚಿತ್ರವಾಗಿದೆ. ನಾನು ಇಷ್ಟರಲ್ಲಿಯೇ ಚಿತ್ರ ವೀಕ್ಷಿಸಲಿದ್ದೇನೆ ಎಂದು ಬಾಲಿವುಡ್ ಚಿತ್ರನಟ ಅಮೀರ್ ಖಾನ್ ತಿಳಿಸಿದ್ದಾರೆ.
ನಗರದಲ್ಲಿ RRR ಚಿತ್ರ ಕುರಿತು ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ಸಂದರ್ಭ ಸುದ್ದಿಗಾರರು ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಗ್ಗೆ ಕೇಳಿದ ಹಿನ್ನೆಲೆ ಮಾತನಾಡಿದ ಅವರು, ಇದು ನಮ್ಮ ಇತಿಹಾಸದ ಒಂದು ಭಾಗವಾಗಿದೆ.
ಕಾಶ್ಮೀರಿ ಪಂಡಿತರಿಗೆ ಸಂಬಂಧಿಸಿದ ಘಟನೆ ದುಃಖಕರವಾಗಿದೆ. ಮಾನವೀಯತೆ ನಂಬುವ ಎಲ್ಲರ ಮನವನ್ನು ದಿ ಕಾಶ್ಮೀರ್ ಫೈಲ್ಸ್ ಚಿತ್ರ ಮುಟ್ಟಿದೆ. ನಾನು ಖಂಡಿತ ಈ ಚಿತ್ರ ನೋಡುತ್ತೇನೆ ಎಂದಿದ್ದಾರೆ.