ಪ್ರಮುಖ ಸುದ್ದಿ
ಅನರ್ಹರ ವಿರುದ್ಧ ತೀರ್ಪು ಬಂದಲ್ಲಿ B ಪ್ಲಾನ್ ಪ್ರಕಾರ ಚುನಾವಣೆಗೆ ಅಸ್ತು
ಅಮಿತ್ ಶಾರಿಂದ ಅನರ್ಹರಿಗೆ ಶುಭ ಸುದ್ದಿ..!
ದೆಹಲಿಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಿಎಂ ಯಡಿಯೂರಪ್ಪ ಭೇಟಿಯಾಗಿ ಅನರ್ಹ ಶಾಸಕರ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಅನರ್ಹ ಶಾಸಕ ಕುರಿತು ನಾಳೆ ಸುಪ್ರೀಂಕೋರ್ಟ್ ನಲ್ಲಿ ಅನರ್ಹರ ಪರವಾಗಿ ತೀರ್ಪು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ಅನರ್ಹರ ವಿರುದ್ಧ ತೀರ್ಪು ದಲ್ಲಿ ಸಿಎಂ ಯಡಿಯೂರಪ್ಪ ಅವರು ತಿಳಿಸಿದಂತೆ ಪ್ಲಾನ್ ಬಿ ಪ್ರಕಾರ ಚುನಾವಣೆ ನಡೆಸಲಾಗುವದು ಎಂದು ಹೇಳಲಾಗುತ್ತಿದೆ.
ಈ ಕುರಿತು ಯಡಿಯೂರಪ್ಪನವರು ಅನರ್ಹರಿಗೆ ತಿಳಿಸಿದ್ದಾರೆ. ವಿರುದ್ಧ ತೀರ್ಪು ಬಂದಲ್ಲಿ ಅನರ್ಹರ ಸಂಬಂಧಿಕರನ್ನು ಚುನಾವಣೆ ಅಖಾಡಕ್ಕೆ ಇಳಿಸಲಾಗುವದು ಪ್ಲಾನ್ ಬಿ ಗೆ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಿಎಂ ಬಿಎಸ್ ವೈ ಅನರ್ಹರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.