ಪ್ರಮುಖ ಸುದ್ದಿ
ಪೌರತ್ವ ಕಾಯ್ದೆ ಹಿಂಪಡೆ ಅಸಾಧ್ಯ -ಅಮಿತ್ ಶಾ
ಪೌರತ್ವ ಕಾಯ್ದೆ ಹಿಂಪಡೆ ಅಸಾಧ್ಯ- ಅಮಿತ್ ಶಾ
ನವ ದೆಹಲಿಃ ದೇಶದಾದ್ಯಂತ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ ದಿಂದ ಹಿಂದೆ ಸರಿಯುವದು ಅಸಾಧ್ಯವಾದದು ಎಂದು ಹೇಳಿದ್ದಾರೆ.
ನೆರೆ ದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರು ಅಲ್ಲಿನ ಬಹುಸಂಖ್ಯಾತರು ನೀಡುವ ಧಾರ್ಮಿಕ ಕಿರುಕುಳದಿಂದ ಬೇಸತ್ತು ಭಾರತಕ್ಕೆ ವಲಸೆ ಬಂದಿದ್ದಾರೆ.
ಅಂತವರಿಗೆ ಭಾರತೀಯ ಪೌರತ್ವ ನೀಡುವದು ಅಗತ್ಯವಿದೆ. ಹೀಗಾಗಿ ನಮ್ಮ ಸರ್ಕಾರ ವ್ಯಾಪ್ತಿ ಬರುವ ಅಧಿಕಾರ ಬಳಸಿಕೊಂಡು ನೆರೆ ದೇಶಗಳಿಂದ ವಲಸೆ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಎಲ್ಲಾ ಪ್ರಯತ್ನಗಳು ಮಾಡುತ್ತೇವೆ ಅದರಲ್ಲಿ ಎರಡು ಮಾತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.