ಪ್ರಮುಖ ಸುದ್ದಿ
ನಾಲ್ಕೇ ತಿಂಗಳಲ್ಲಿ ಭವ್ಯವಾದ “ಶ್ರೀರಾಮ” ಮಂದಿರ ನಿರ್ಮಾಣ – ಅಮಿತ್ ಶಾ
ಜಾರ್ಖಂಡ್ಃ ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ‘ಭವ್ಯವಾದ’ ಶ್ರೀರಾಮ್ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಭರವಸೆ ನೀಡಿದ್ದಾರೆ.
ರಾಜ್ಯದ ಪಕೂರ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತ ಈ ವಿಷಯ ತಿಳಿಸಿದರು. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದ್ದಾಗಿದೆ. ಇನ್ನೂ ಅಯೋಧ್ಯೆಯಲ್ಲಿ ರಾಮ್ ಭಗವಾನರ ಆಕಾಶ-ಎತ್ತರದ ಮಂದಿರ ನಿರ್ಮಿಸಲಾಗುವುದು.
ಈಗಾಗಲೇ ರಾಮ ಮಂದಿರ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಅಂತಿಮ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲಾ 18 ಮರು ಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪಂಚ ಸದಸ್ಯರ ಪೀಠ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಅವರು ಈ ಹೇಳಿಕೆ ನೀಡಿರುವದು ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ.