ಪ್ರಮುಖ ಸುದ್ದಿ
BIG B ಅಮಿತಾಬ್ ಬಚ್ಚನ್ ಗೆ ಮತ್ತೆ ಕೊರೊನಾ ಕಾಟ.!
BIG B ಅಮಿತಾಬ್ ಬಚ್ಚನ್ ಗೆ ಮತ್ತೆ ಕೊರೊನಾ ಕಾಟ.!
ಮುಂಬೈಃ ಕೊರೊನಾ ಸೋಂಕು ತಗುಲಿ ಹಲವಾರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರಾಮವಾಗಿ ವಾಪಸ್ ಆಗಿದ್ದ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಇದೀಗ ಮತ್ತೆ ಕೊರೊನಾ ವೈರಸ್ ಭೀತಿ ಎದುರಾಗಿದೆ.
ಕಾರಣವಿಷ್ಟೆ..ಅಮಿತಾಬ್ ಬಚ್ಚನ್ ಅವರು, ಆಸ್ಪತ್ರೆಯಿಂದ ಆರಾಮವಾಗಿ ಬಂದ ಮೇಲೆ ಕೌನ್ ಬನೇಗಾ ಕರೋಡ್ ಪತಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಶೂಟಿಂಗ್ ಸೆಟ್ ನ ಇಬ್ಬರಿಗೆ ಕೊರೊನಾ ಸೋಂಕು ದೃಢ ಪಟ್ಟ ಹಿನ್ನೆಲೆ ನಟ ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಭೀತಿ ಉಂಟಾಗಿದೆ.
ಈಚೆಗೆ ಕೊರಿನಾದಿಂದ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ಮುಗಿಸಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.