ಅಮಿತ್ ಶಾ ಬಿಜೆಪಿ ಯಾತ್ರೆಗೆ ತಡವಾಗಿ ಬಂದಿದ್ದೇಕೆ?
‘ಬಿಜೆಪಿ ಟ್ರಾಫಿಕ್’ನಿಂದ ಅಂಬುಲೆನ್ಸ್ ಮತ್ತು ಜನರ ಪರದಾಟ!
ಬೆಂಗಳೂರು: ಭಾರತೀಯ ಜನತಾ ಪಕ್ಷ ನಗರದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನವಕರ್ನಾಟಕ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದೆ. ಬಿಜೆಪಿ ಅದ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಬೇಕಿತ್ತು. ಆದರೆ, ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ರಾಜ್ಯದ ಮೂಲೆ ಮೂಲೆಗಳಿಂದ ನಗರಕ್ಕೆ ಎಂಟ್ರಿ ಆಗಿದ್ದಾರೆ. ಹೀಗಾಗಿ, ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದೆ. ಪರಿಣಾಮ ಬಿಜೆಪಿ ಅದ್ಯಕ್ಷ ಅಮಿತ್ ಶಾ ಅವರೂ ಸಹ HAL ವಿಮಾನ ನಿಲ್ದಾಣದಿಂದ ಬಿಜೆಪಿ ಆಯೋಜಿಸಿರುವ ಸಭಾ ಸ್ಥಳಕ್ಕೆ ಬರಲಾಗದ ಸ್ಥಿತಿ ನಿರ್ಮಾಣ ಆಗಿತ್ತು.
ಮತ್ತೊಂದು ಕಡೆ ಎಲಿಕಾಪ್ಟರ್ ಮೂಲಕ ಅಮಿತ್ ಶಾ ಅವರನ್ನು ಕರೆತರುವ ಪ್ರಯತ್ನ ನಡೆಯಿತು. ಆದರೂ ಹೆಲಿಕಾಪ್ಟರ್ ಬಳಕೆಗೆ ಈ ಮೊದಲು ಪ್ಲಾನ್ ಇಲ್ಲದ ಕಾರಣ ವಿಳಂಬವಾಗಿದ್ದು ಅಮಿತ್ ಶಾ HAL ನಲ್ಲಿ ಕಾದು ಕೂಡುವಂತಾಯಿತು. ಹೀಗಾಗಿ, ಅಮಿತ್ ಶಾ ಸಭೆಗೆ ತಡವಾಗಿ ಎಲಿಕಾಪ್ಟರ್ ಮೂಲಕ ಆಗಮಿಸಿ ಸಭೆಗೆ ಚಾಲನೆ ನೀಡಿದರು. ಮತ್ತೊಂದು ಕಡೆ ಬಿಜೆಪಿ ಕಾರ್ಯಕರ್ತರು ಟ್ರಾಫಿಕ್ ನಲ್ಲಿ ಸಿಕ್ಕಿ ಬಿದ್ದಿದ್ದು ಸಭೆಗೆ ತಲುಪುವುದು ವಿಳಂಬವಾಯಿತು.
ಬಿಜೆಪಿ ಯಾತ್ರೆಯಿಂದಾಗಿ ಬೆಂಗಳೂರು ಟ್ರಾಫಿಕ್ ಜಾಮ್ ಆಗಿದೆ. ಸುಮಾರು ಆರೇಳು ಕಡೆ ಅಂಬುಲೆನ್ಸ್ ಗಳು ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದಿದ್ದು ತೊಂದರೆ ಅನುಭವಿಸುವಂತಾಗಿದೆ. ಸಾರ್ವಜನಿಕರು ಬಿಜೆಪಿ ಹಾಗೂ ಟ್ರಾಫಿಕ್ ನಿಯಂತ್ರಿಸಲಾಗದ ಸರ್ಕಾರ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.