ಪ್ರಮುಖ ಸುದ್ದಿ
ಬಿಜೆಪಿ ವಿಜಯ ಮಾಲೆಯನ್ನು ಅಮಿತ್ ಶಾ ಸಮರ್ಪಿಸಿದ್ದು ಯಾರಿಗೆ ಗೊತ್ತಾ?
ದೆಹಲಿ : ಕರ್ನಾಟಕ, ಕೇರಳ ಮತ್ತು ತ್ರಿಪುರ ರಾಜ್ಯಗಳಲ್ಲಿ ಹತ್ಯೆಗೀಡಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಇಂದಿನ ವಿಜಯವನ್ನು ಕಣ್ಣೀರಿನಿಂದ ಸಮರ್ಪಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಹೇಳಿದರು. ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣ ಫಲಿತಾಂಶದ ಬಳಿಕ ಸಂಜೆ ವೇಳೆಗೆ ನಗರದ ಬಿಜೆಪಿ ನೂತನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಆಡಳಿತ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಫಲವಾಗಿ ತ್ರಿಪುರದಲ್ಲಿ ಬಿಜೆಪಿ ಬಾವುಟ ಹಾರಿಸಿದೆ. ಈ ವಿಜಯ ಯಾತ್ರೆ ಕರ್ನಾಟಕದಲ್ಲೂ ಮುಂದುವರೆಸಲಿದ್ದೇವೆ. ಅಂತೆಯೇ 2019ರ ಚುನಾವಣೆಯಲ್ಲೂ ಮೋದಿ ಅವರ ನೇತೃತ್ವದಲ್ಲಿ ಅಧಿಕ ಬಹುಮತದಿಂದ ಅಧಿಕಾರ ಹಿಡಿಯಲಿದ್ದೇವೆ. ಮೋದಿ ಅವರು ಅಭಿವೃದ್ಧಿಯ ಓಟ ಮುಂದುವರೆಸಲಿ. ದೇಶದ ಜನ ಅವರ ಜೊತೆಗಿದ್ದೇವೆ ಎಂದು ಹೇಳಿದರು.