ಫೆ.25ಕ್ಕೆ ದೊರೆಗಳ ನಾಡು ಸುರಪುರಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮನ
ಯಾದಗಿರಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ನಾಳೆ ಬೀದರ್ ಜಿಲ್ಲೆಯ ಹುಮನಾಬಾದ್ ನಿಂದ ಎಲಿಕಾಪ್ಟರ್ ಮೂಲಕ ಸುರಪುರಕ್ಕೆ ಆಗಮಿಸಲಿದ್ದಾರೆ. ಮದ್ಯಾನ 12:30 ರ ಸುಮಾರಿಗೆ ಸುರಪುರಕ್ಕೆ ಆಗಮಿಸಲಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾವೇಶದ ಬಳಿಕ ಕೆಲ ಹೊತ್ತು ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಮದ್ಯಾನದ ಉಪಹಾರ ಸೇವಿಸಿದ ನಂತರ ಹೆಲಿಕಾಪ್ಟರ ಮೂಲಕ ಯನಗುಂಡಿ ಗ್ರಾಮಕ್ಕೆ ತೆರಳಿ ಯನಗುಂಡಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಅದೇ ವೇಳೆ ಕೋಲಿ ಸಮಾಜದ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.
ಸಂಜೆ 5ಗಂಟೆ ಸುಮಾರಿಗೆ ಕಲಬುರಗಿಗೆ ತೆರಳಿ ಎಸ್ಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಶರಣಬಸವೇಶ್ವರದ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ 7ಗಂಟೆ ಸುಮಾರಿಗೆ ಹೆಚ್.ಕೆ.ಸಿ.ಸಿ.ಐ ಆಡಿಟೋರಿಯಂ ನಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.