ಪ್ರಮುಖ ಸುದ್ದಿ
ನಾಳೆ ಅಮ್ಮ ಕ್ಯಾಂಟೀನ್ ವಾರ್ಷಿಕೋತ್ಸವ-ಸರಿಗಮಪ ಖ್ಯಾತಿಯ ಗಾಯಕ ಆಗಮನ
ರಕ್ತದಾನ ಶಿಬಿರ, ಸಂಗೀತ ಕಾರ್ಯಕ್ರಮ-ಸರ್ವರಿಗೂ ಸ್ವಾಗತ
ಸರಿಗಮಪ ಖ್ಯಾತಿಯ ಮಹಿಬೂಬಸಾಬ ಅವರಿಂದ ಸಂಗೀತ ಕಾರ್ಯಕ್ರಮ
ಯಾದಗಿರಿ,ಶಹಾಪುರಃ ನಗರದಲ್ಲಿ ಕಳೆದ ವರ್ಷ ಆರಂಭಗೊಂಡ ಅಮ್ಮ ಕ್ಯಾಂಟೀನ್ ವಾರ್ಷಿಕೋತ್ಸವ ಸಮಾರಂಭ ಹಿನ್ನೆಲೆ ನಗರದಲ್ಲಿ 2019 ಜುಲೈ 15 ರಂದು ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರ ಹಾಗೂ ಸರಿಗಮಪ ಖ್ಯಾತಿಯ ಮಹಿಬೂಬಸಾಬ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಆಭಗವಹಿಸಬೇಕೆಂದು ಮಣಿಕಂಠ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಗುರು ಮಣಿಕಂಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ.ಲಕ್ಷ್ಮೀದೇವಿ ಅವರ 35 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಳೆ ವರ್ಷ ಅಮ್ಮ ಕ್ಯಾಂಟೀನ್ ಆರಂಭಿಸಲಾಯಿತು. ಪ್ರಸ್ತುತ್ ಅಮ್ಮ ಕ್ಯಾಂಟೀನ್ ಒಂದು ವರ್ಷ ಪೂರ್ಣಗೊಳಿಸಿದ್ದು, ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ. ಜೊತೆಗೆ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಮತ್ತು ರಕ್ತದಾನ ಶಿಬಿರವು ನಡೆಯಲಿದೆ.
ಕಾರಣ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.