ಪ್ರಮುಖ ಸುದ್ದಿ
ಬುದ್ಧಿಜೀವಿಗಳು ಮತ್ತು ವಿಷ ಸರ್ಪಗಳು : ಆಂದೋಲಶ್ರೀ ಕಿಡಿ
ಯಾದಗಿರಿ: ನಾಗರ ಪಂಚಮಿ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬಂದು ಅನಾಥ ಮಕ್ಕಳಿಗೆ ಹಾಲು ನೀಡಿ, ಹುತ್ತ ಮತ್ತು ಕಲ್ಲಿನ ವಿಗ್ರಹಕ್ಕೆ ಹಾಲೆರೆದು ವ್ಯರ್ಥ ಮಾಡಬೇಡಿ ಎಂದು ಬುದ್ಧಿಜೀವಿಗಳೆಂಬ ವಿಷಸರ್ಪಗಳು ಉಪದೇಶ ನೀಡುತ್ತವೆ. ನಾಗರ ಪಂಚಮಿ ಮರುದಿನ ವಿಷ ಸರ್ಪಗಳು ಮತ್ತೆ ಬಿಲ ಸೇರುತ್ತವೆ ಎಂದು ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಕಿಡಿ ಕಾರಿದ್ದಾರೆ.
ವಾಡಿ ತಾಲೂಕಿನ ಕೊಂಚೂರು ಗ್ರಾಮದ ಶ್ರೀ ಆಂಜನೇಯ ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ಏರ್ಪಡಿಸಲಾಗಿದ್ದ ಸುದರ್ಶನ ನಾರಸಿಂಹ ಯಾಗ-ಯಜ್ಞ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತಾಡಿದರು. ಹಾಲೆರೆಯುವುದನ್ನು ವ್ಯರ್ಥವೆಂದು ವಿರೋಧಿಸುವವರು ಒಂದು ಹಬ್ಬದ ಸಂದರ್ಭ ಪ್ರಾಣಿಗಳ ರಕ್ತವನ್ನೇ ಹರಿಸಿದಾಗ ಮೌನವಾಗಿರುತ್ತಾರೆ ಎಂದು ಬುದ್ಧಿಜೀವಿಗಳ ವಿರುದ್ಧ ಸಿದ್ಧಲಿಂಗಶ್ರೀ ಹರಿಹಾಯ್ದರು.