ಪ್ರಮುಖ ಸುದ್ದಿ
ಆನೇಗೊಂದಿಯ ವ್ಯಾಸರಾಜರ ವೃಂದಾವನ ವಿರೂಪ!
ಕೊಪ್ಪಳ : ವ್ಯಾಸರಾಜರ ವೃಂದಾವನ ಅಗೆದು ವಿರೂಪಗೊಳಿಸಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ನಿಧಿಗಾಗಿ ದುಷ್ಕರ್ಮಿಗಳು ವೃಂದಾವನ ಅಗೆದಿರುವ ಶಂಕೆ ವ್ಯಕ್ತವಾಗಿದೆ.
ನವ ವೃಂದಾವನ ವಿವಾದಿತ ಪ್ರದೇಶವಾಗಿದ್ದು ಉತ್ತರಾಧಿ ಮಠ ಹಾಗೂ ರಾಯರ ಮಠದ ನಡುವೆ ಪೂಜಾ ಕಾರ್ಯದ ಬಗ್ಗೆ ವಿವಾದವಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.