ಬುದ್ಧನಿಗೆ ಶರಣಾದ ಕ್ರೂರಿ ಅಂಗುಲಿಮಾಲಾ ಅದ್ಹೇಗೆ ಅಂತೀರಾ.? ಓದಿ
ದಿನಕ್ಕೊಂದು ಕಥೆ
ಅಂಗುಲಿಮಾಲ
ಕೋಸಲ ರಾಜ್ಯದಲ್ಲಿ ಪಕ್ಕದ ಕಾಡಿನಲ್ಲಿ ಅಂಗುಲಿಮಾಲ ಎಂಬ ಕ್ರೂರ ರಾಕ್ಷಸನಿದ್ದ. ಆತನ ಕ್ರೌರ್ಯವನ್ನು ಬಿಡಿಸುವೆನೆಂದು ಗೌತಮಬುದ್ಧನೇ ಒಮ್ಮೆ ಕಾಡಿನೊಳಗೆ ಹೋಗುತ್ತಾನೆ, ಜನರೆಲ್ಲ ಹಾಗೆ ದುಡುಕಬಾರದೆಂದೇ ಬುದ್ಧನನ್ನು ತಡೆದರು.
ಆದರೆ ಆತನೊಬ್ಬನೇ ಯಾರ ಭಯವೂ ಇಲ್ಲದೆ ಕಾಡಿನೊಳಗೆ ಹೋಗಿಬಿಟ್ಟನು. ಪ್ರಶಾಂತ ಮುಖಭಾವದಿಂದ ಆತ ನಡೆದು ಬರುವುದನ್ನು ದೂರದಿಂದಲೇ ಅಂಗುಲಿಮಾಲ ಕಂಡನು. ಕತ್ತಿಯನ್ನು ಝಳಪಿಸುತ್ತಲೇ ಗಿಡದ ಗೊಲ್ಲೊಂದನ್ನು ಕತ್ತರಿಸುತ್ತಲೇ ಅಂಗುಲಿಮಾಲ “ಏಯ್ ಮೂರ್ಖನೇ, ಯಾಕಿತ್ತ ಕಡೆ ಬರುವಿ? ನಾನಿಂದು ನಿನ್ನನ್ನು ಇದೇ ರೀತಿಯಲ್ಲಿ ಕತ್ತರಿಸಿ ಬಿಡುವೆ … ನೋಡುತ್ತಿರು!” ಕೂಗಾಡಿದ.
ಆದರೆ ಬುದ್ಧ ಎಲ್ಲರಂತೆ ಹೆದರಿ ನಡುಗಲಿಲ್ಲ. ಬುದ್ಧ ಸಹಜ ಪ್ರೀತಿ ವಾತ್ಸಲ್ಯದಿಂದಲೇ ಆ ಕ್ರೂರ ರಾಕ್ಷಸನನ್ನು ಮಾತನಾಡಿಸಿದ “ಮಗೂ, ಆ ಗಿಡವನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಬಿಟ್ಟೆಯಲ್ಲ. ಅದಕ್ಕೆ ಜೀವ ಕೊಡಬಲ್ಲೆಯಾ?” ಎಂದೂ ಪ್ರೀತಿಯಿಂದಲೇ ಕೇಳಿದ. ಇದುವರೆಗೂ ಅಷ್ಟೊಂದು ಪ್ರೀತಿಯಿಂದ ಯಾರೂ ಅವನನ್ನು ಮಾತನಾಡಿಸಿದ್ದೇ ಇರಲಿಲ್ಲ. ಹಾಗೆಂದೇ ತನ್ನ ತಪ್ಪನ್ನು ಕೂಡಲೇ ಒಪ್ಪಿಕೊಂಡು ಅಲ್ಲೇ ಆತ ಬುದ್ಧನಿಗೆ ಶರಣಾದನು.
ನೀತಿ :– ವಿನಮ್ರತೆಯಿಂದ ಎದುರಿಗಿದ್ದ ವ್ಯಕ್ತಿಯ ದರ್ಪನಾಶ ಮಾಡಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.