ಪ್ರಮುಖ ಸುದ್ದಿಬಸವಭಕ್ತಿ

ಕಲ್ಬುರ್ಗಿಃ ಜಾತ್ರಾ ಮಹೋತ್ಸವದಲ್ಲಿ ಗೆಳೆಯರಿಂದ ನಿರಂತರ ಅನ್ನ ದಾಸೋಹ

ಗುಲ್ಬರ್ಗಾ ಗೆಳೆಯರ ಬಳಗದಿಂದ ಅನ್ನ ದಾಸೋಹ

ಕಲ್ಬುರ್ಗಿಃ ಜಾತ್ರಾ ಮಹೋತ್ಸವದಲ್ಲಿ ಗೆಳೆಯರಿಂದ ನಿರಂತರ ಅನ್ನ ದಾಸೋಹ

ಕಲಬುರಗಿ:- ಶ್ರೀ ಶರಣಬಸವೇಶ್ವರರ ೨೦೦ನೇ ಜಾತ್ರಮಹೋತ್ಸವ ಅಂಗವಾಗಿ ಗುಲಬರ್ಗಾ ಗೆಳೆಯರ ಬಳಗ ವತಿಯಿಂದ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ನಿರಂತರ ಅನ್ನದಾಸೋಹವನ್ನು ಗೆಳೆಯರ ಬಳಗದಿಂದ ಆಯೋಜಿಸಿಲಾಗಿದೆ.

ಕಲಬುರಗಿ ನಗರದ ಉಕ ಭಾಗದ ಪ್ರಮುಖ ದೇವಸ್ಥಾನ ವಾಗಿರುವ ಶ್ರೀ ಶರಣಬಸವೇಶ್ವರರ ಜಾತ್ರೆಗೆ ನಗರ, ಗ್ರಾಮೀಣ ಹಾಗೂ ವಿವಿಧ ಜಿಲ್ಲೆಯಿಂದ ಸರ್ವ ಭಕ್ತ ಸಮೂಹ ಪಾದಯಾತ್ರೆ ಮೂಲಕ ಹಾಗೂ ರಥೋತ್ಸವ ಸಂದರ್ಭ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದಾಸೋಹ ಕಾರ್ಯವನ್ನು ಬಳಗ ಅನುಕೂಲವಾಗುವ ನಿಟ್ಟಿನಲ್ಲಿ ಜಂತಾ ಲೇಔಟ್ ಕ್ರಾಸ್ ಬಳಿ ಅನ್ನ ದಾಸೋಹ ಆಯೋಜಿಸಲಾಗಿದೆ.

ಇನ್ನೂ ಅನ್ನದಾಸೋಹದಲ್ಲಿ ಹುಗ್ಗಿ, ಪಲಾವ್, ಸಾಂಬಾರ ಹಾಗೂ ಮಜ್ಜಿಗೆ ಸವಿದ ಭಕ್ತರು ಕೃತಾರ್ಥ ವ್ಯಕ್ತಪಡಿಸುತ್ತಿದ್ದಾರೆ.

ಹಲವಾರು ವರ್ಷಗಳಿಂದ ಗುಲಬರ್ಗಾ ಗೆಳೆಯರ ಬಳಗವು ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವದಲ್ಲಿ ನಿತ್ಯ ಅನ್ನದಾಸೋಹವು ಮಾಡುತ್ತಾ ಬಂದಿದ್ದಾರೆ.
ಇಂತಹ ಮಹತ್ಕಾರ್ಯ ಹೀಗೆ ಮುಂದುವರೆಯಲಿ ಎಂದು ವಿನಯವಾಣಿ ಹಾರೈಸುತ್ತದೆ.

-ಸತೀಶ ಎಸ್ ಮೂಲಿಮನಿ.

Related Articles

Leave a Reply

Your email address will not be published. Required fields are marked *

Back to top button