ಪ್ರಮುಖ ಸುದ್ದಿ
ಕರ್ನಾಟಕ ಬಂದ್ ಬೇಡ ಚರ್ಚೆಗೆ ಬನ್ನಿ – ಬಿಎಸ್ ವೈ
ಕರ್ನಾಟಕ ಬಂದ್ ಮಾಡಿ ತೊಂದರೆ ಕೊಡೋದು ಬೇಡ
ಬೆಂಗಳೂರಃ ಗುರುವಾರದ ನನ್ನೆಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸುವೆ. ಬಂದ್ ಗೆ ಕರೆ ಕೊಟ್ಟಿರುವ ಕರ್ನಾಟಕ ಸಂಘಟನೆಗಳ ಒಕ್ಕೂಟ ನಾಯಕರೊಂದಿಗೆ ಮಾತನಾಡಲು ನಾನು ಸಿದ್ಧ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಬಜೆಟ್ ತಯಾರಿ ಸಭೆಯಲ್ಲಿ ಭಾಗವಹಿಸುವ ಮೊದಲು ಮಾಧ್ಯಮದೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಕನ್ನಡಿಗರ ಹಿತ ಕಾಪಾಡಲು ನಾನು ಬದ್ಧನಿದ್ದೇನೆ. ನಾಳೆಯ ಎಲ್ಲಾ ಕಾರ್ಯಕ್ರಮಗಳು ರದ್ದು ಪಡಿಸುವೆ. ನನ್ನ ಮನೆಗೆ ಬನ್ನಿ ಕುಳಿತು ಚರ್ಚೆ ಮಾಡೋಣ.
ಸಮರ್ಪಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ. ಬಂದ್ ಮಾಡಿ ಜನರಿಗೆ ತೊಂದರೆ ಕೊಡೋದು ಬೇಡವೆಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ಸಾರ್ವಜನಿಕರಿಗೆ ಯಾಕೆ ತೊಂದರೆ ಕೊಡೋದು. ಮನೆಗೆ ಬನ್ನಿ ಎಂದು ಅವರು ಮನವಿ ಮಾಡಿದ್ದಾರೆ.