ವಿಚಾರಣೆಗೆ ಹಾಜರಾಗುವೆ, ಅಪರಾಧಿ ನಾನಲ್ಲ – ಅನುಶ್ರೀ
ವಿಚಾರಣೆಗೆ ಹಾಜರಾಗುವೆ, ಅಪರಾಧಿ ನಾನಲ್ಲ – ಅನುಶ್ರೀ
ಬೆಂಗಳೂರಃ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಅದರಂತೆ ಶುಕ್ರವಾರ ಸೆ.25 ರಂದು ಖುದ್ದಾಗಿ ಮಂಗಳೂರಿಗೆ ತೆರಳಿ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವೆ ಎಂದು ನಿರೂಪಕಿ, ನಟಿ ಅನುಶ್ರೀ ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ನಾನು ವಿಚಾರಣೆಗೆ ಹಾಜರಾಗಲಿದ್ದು, ಸಿಸಿಬಿ ಪೊಲೀಸರಿಗೆ ಸಹಕರಿಸುವೆ. ಆದರೆ ಕೆಲ ಮಾಧ್ಯಮಗಳಲ್ಲಿ ನಾನು ನಟಿಸಿರುವ ಸಿನಿಮಾದ ತುಣುಕುಗಳನ್ನು ಮತ್ತು ಚಿತ್ರಗಳನ್ನು ತೋರಿಸಿ ಅಪರಾಧಿಯಂತೆ ಬಿಂಬಿಸಲಾಗುತ್ತಿದೆ.
ಡ್ರಗ್ಸ್ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ವಿಚಾರಣೆಗೆಂದು ಕರೆದಕೂಡಲೇ ನಾನು ಅಪರಾಧಿಯಾಗುವದಿಲ್ಲ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇನೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಇಲ್ಲ ಸಲ್ಲದ ಆರೋಪ ಮಾಡಬೇಡಿ.
ಕುಟುಂಬಸ್ಥರಿಗೆ ಈಗಾಗಲೇ ನೋವು ತಂದಿದೆ. ಅತಿಯಾದ ಪ್ರಚಾರ ಸತ್ಯದ ವಿಚಾರವನ್ನು ದಾರಿ ತಪ್ಪಿಸಿದಂತಾಗುತ್ತದೆ. ನಾನು ವಿಚಾರಣೆ ಎದುರಿಸಿದ ನಂತರ ಮಾತನಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.