ನೆರವಾಯಿತು ‘ಅಪ್ಪಾಜಿ ಕ್ಯಾಂಟೀನ್’ ; ಹೆಸರಾದರು ಶರವಣ
MLC ಶರವಣ ನೇತೃತ್ವದಲ್ಲಿ ಅನ್ನದಾಸೋಹ
ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಮತ್ತೊಂದು ಕಡೆ ಅನೇಕ ಮನೆಗಳಿಗೆ ನೀರುನುಗ್ಗಿದ್ದು ಜನ ಪರದಾಡುವಂತಾಗಿದೆ. ಚಂದ್ರಾ ಲೇಔಟ್ ನ ಕಮರ್ ಬಡಾವಣೆಯ ಜನರಂತೂ ಅಕ್ಷರಶಃ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
ಸುಮಾರು 1500ಮನೆಗಳಿರುವ ಕಮರ್ ಬಡಾವಣೆಯಲ್ಲಿ 4000ಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ಈ ಪೈಕಿ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಹೀಗಾಗಿ, ನಿನ್ನೆಯಿಂದ ಊಟ, ನಿದ್ರೆಯಿಲ್ಲದೆ ನೂರಾರು ಜನ ನಿರಾಶ್ರಿತರಾಗಿದ್ದಾರೆ. ಆದರೂ, ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ. ಸಮಸ್ಯೆ ಕೇಳಿಲ್ಲ, ಪರಿಹಾರ ನೀಡಿಲ್ಲ ಅನ್ನೋದು ಕಮರ್ ಬಡಾವಣೆಯ ಜನರ ಆರೋಪವಾಗಿದೆ.
ಸಮಸ್ಯೆ ಅರಿತ ವಿಧಾನ ಪರಿಷತ್ ಸದಸ್ಯ ಶರವಣ್ ಅವರು ಮಾತ್ರ ಬಡಾವಣೆಗೆ ಭೇಟಿ ನೀಡಿದ್ದಾರೆ. ಜನರ ಕಷ್ಟ ಕೇಳಿ ತಕ್ಷಣಕ್ಕೆ ದೇವೇಗೌಡ ‘ನಮ್ಮ ಅಪ್ಪಾಜಿ’ ಕ್ಯಾಂಟೀನ್ ಮೂಲಕ ಉಪಹಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಖುದ್ದು ತಾವೇ ಜನರಿಗೆ ಆಹಾರ ಬಡಿಸುವ ಮೂಲಕ ನೆರವಾಗಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಜಕ್ಕೂ ಶರವಣ ಅವರ ಈ ಕಾರ್ಯ ಶ್ಲಾಘನೀಯವಾದುದು.