ಅಭಿಮಾನಿ ಮನೆಗೆ ಅಪ್ಪು ದಂಪತಿ ಭೇಟಿ, ಶುಭ ಹಾರೈಕೆ!
ಚಿತ್ರದುರ್ಗ: ನಗರದ ಕೋಣಯ್ಯನಹಟ್ಟಿಯಲ್ಲಿರುವ ಅಭಿಮಾನಿ ಮನೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದಿಢೀರ್ ಭೇಟಿ ನೀಡಿದ್ದಾರೆ. ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಜಿಲ್ಲಾದ್ಯಕ್ಷ ಮೋಹನ್ ಡಿಸೆಂಬರ್ 10ರಂದು ಗೃಹ ಪ್ರವೇಶಕ್ಕೆ ಆಹ್ವಾನಿಸಿದ್ದರು. ಆದರೆ, ಬಿಜಿ ಶೆಡ್ಯೂಲ್ ನಡುವೆ ಅಭಿಮಾನಿಯ ಗೃಹ ಪ್ರವೇಶಕ್ಕೆ ಅಪ್ಪು ಬರಲಾಗಿರಲಿಲ್ಲ.
ನಿನ್ನೆ ‘ಟಗರು’ ಚಿತ್ರದ ಆಡಿಯೋ ಬಿಡುಗಡೆಗಾಗಿ ಬಳ್ಳಾರಿಗೆ ತೆರಳಿದ್ದ ಅಪ್ಪು ಇಂದು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮದ್ಯೆ ಅಭಿಮಾನಿ ಮನೆಗೆ ಭೇಟಿ ನೀಡಿದ್ದಾರೆ. ಇಂದು ಮದ್ಯಾನ 12ಗಂಟೆ ಸುಮಾರಿಗೆ ಪತ್ನಿಯೊಂದಿಗೆ ಅಭಿಮಾನಿ ಮನೆಗೆ ಬಂದ ಪುನೀತ್ ದಂಪತಿಗೆ ಮೋಹನ್ ಕುಟುಂಬಸ್ಥರು ಆರತಿ ಎತ್ತುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ.
ಕೆಲಹೊತ್ತು ಅಭಿಮಾನಿ ಮೋಹನ್ ಅವರ ಕುಟುಂಬದ ಜೊತೆಗೆ ಕಾಲ ಕಳೆದ ಅಪ್ಪು ದಂಪತ ಭೋಜನ ಸ್ವೀಕರಿಸಿ, ಶುಭ ಹಾರೈಸಿದ್ದಾರೆ. ಅಭಿಮಾನಿ ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಅಭಿಮಾನಿಯ ಮನೆಗೆ ಬಂದು ಶುಭಹಾರೈಸುವ ಮೂಲಕ ಪುನೀತ್ ಸರಳತೆ ಮೆರೆದಿದ್ದಾರೆ. ಹೃದಯ ಶ್ರೀಮಂತಿಕೆಗೆ ಹೆಸರಾಗುವ ಮೂಲಕ ಅಣ್ಣಾವ್ರ ನೆನಪನ್ನು ಮರುಕಳಿಸಿದ್ದಾರೆ. ಅಭಿಮಾನಿ ಕುಟುಂಬ ಫುಲ್ ಖುಷ್ ಆಗಿದ್ದು ಅಪ್ಪು ದಂಪತಿಗೆ ಮನಸಾರೆ ಹರಸಿದೆ.