ಪ್ರಮುಖ ಸುದ್ದಿ
ಮೇಲುಕೋಟೆ ನರಸಿಂಹಸ್ವಾಮಿ ಏನಯ್ಯ ನಿನ್ನ ಅರ್ಚಕರ ಪವಾಡ!
ಮಂಡ್ಯ: ಜಿಲ್ಲೆಯ ಮೇಲು ಕೋಟೆಯ ಯೋಗನರಸಿಂಹ ಸ್ವಾಮಿ ದೇಗುಲದಲ್ಲಿ ಅರ್ಚಕರ ಮದ್ಯೆ ಮಾತಿನ ಚಕಮಕಿ ನಡೆದಿದೆ. ದೇಗುಲದಲ್ಲೆಡ ಅರ್ಚಕರಿಬ್ಬರು ಕೈ ಕೈ ಮಿಲಾಯಿಸಲು ಮುಂದಾಗಿದ್ದರೆಂದು ತಿಳಿದು ಬಂದಿದೆ. ಇಬ್ಬರ ಜಗಳದಿಂದ ದೇಗುಲದ ಪೂಜೆ ಸ್ಥಗಿತಗೊಂಡಿದೆ ಎನ್ನಲಾಗಿದೆ ಅರ್ಚಕರ ಸಮರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ.
ದೇಗುಲಕ್ಕೆ ನೂತನ ಅರ್ಚಕರನ್ನಾಗಿ ನೇಮಿಸಿರುವ ಸರ್ಕಾರದ ಆದೇಶ ಪ್ರತಿಯನ್ನು ತಂದ ಭಾಷ್ಯಂ ಸ್ವಾಮೀಜಿ ಹಾಗೂ ಅರ್ಚಕ ನಾರಾಯಣ ಭಟ್ಟರು ಡೋಂಟ್ ಕೇರ್ ಅಂದಿದ್ದಾರೆ. ಅಲ್ಲದೆ ಪೂಜಿಸಲು ಅವಕಾಶ ನೀಡದ ಕಾರಣ ಇಬ್ಬರ ಮದ್ಯೆ ವಾಗ್ವಾದ ಶುರುವಾಗಿದೆ. ಅರ್ಚಕರ ಆಟಾಟೋಪ ಕಂಡ ಭಕ್ತರು ಕಾಪಾಡಪ್ಪ ನರಸಿಂಹಸ್ವಾಮಿ ಎಂದು ಕೈ ಮುಗಿಯುತ್ತಿದ್ದಾರೆ.