ಅರ್ಕಾವತಿ ಹಗರಣದಿಂದ ಸಿದ್ರಾಮಯ್ಯ ಬಚಾವ್-ಸೊಗಡು ಶಿವಣ್ಣ
ಏಕವಚನದಲ್ಲಿ ಮಾತನಾಡುವ ಪರಮೋಚ್ಛ ನಾಯಕ ಯಾರು.?
ತುಮಕೂರಃ ಏಕವಚನದಲ್ಲಿ ಮಾತನಾಡುವದರಲ್ಲಿ ಪರಮೋಚ್ಛ ನಾಯಕ ಸಿದ್ರಾಮಯ್ಯ ಎಂದು ಬಿಜೆಪಿಯ ಸೊಗಡು ಶಿವಣ್ಣ ಮಾಜಿ ಸಿಎಂ ಸಿದ್ರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸ್ಪೀಕರ್ ಅವರನ್ನು ಏಕವಚನದಲ್ಲಿ ಮಾತನಾಡುವ ಅವರು ಸ್ಪೀಕರ್ ಗೌರವಾನ್ವಿತರು ಎಂಬುದು ತಿಳಿದಿಲ್ಲವೇ.? ಮಾಜಿ ಸಿಎಂ ಆಗಿ ಸ್ಪೀಕರ ಅವರನ್ನು ಗೌರವಿಸಬೇಕೆಂಬ ಜ್ಞಾನವಿಲ್ಲವೇ.? ಎಂದು ಪ್ರಶ್ನಿಸಿದ್ದಾರೆ.
ಮತ್ತು ಸಿದ್ರಾಮಯ್ಯ ಮಾತೆತ್ತಿದರೆ ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತಾರೆ, ಆದರೆ ಅರ್ಕಾವತಿ ಹಗರಣದಲ್ಲಿ ಅವರೇ ಜೈಲು ಪಾಲಾಗುತ್ತಿದ್ದರು. ಲೋಕಾಯುಕ್ತ ಸಂಸ್ಥೆ ತೆಗೆದು ಎಸಿಬಿ ಓಪನ್ ಮಾಡುವ ಮೂಲಕ ಬಚಾವ್ ಆಗಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ನಲ್ಲಿ ಯಾರು ಜೈಲಿಗೆ ಹೋಗಿ ಬಂದಿಲ್ವಾ.? ಕಾಂಗ್ರೆಸ್ ನಲ್ಲಿ ಮನಿ ಉಗ್ರಗಾಮಿಗಳಿಲ್ವಾ.? ತಾವೂ ಸಹ ಹಿಂದೂ ಎಂದು ಹೇಳಿಕೆ ನೀಡುವ ಅವರು ಹಿಂದೂಗಳನ್ನು ಯಾಕೇ ಹೀಯಾಳಿಸುತ್ತಾರೆ. ಹಿಂದೂಗಳ ಬಗ್ಗೆ ಗೌರವ ತೋರದ ಅವರ ನಡೆ ನನ್ನ ರಕ್ತ ಕುದಿಯುವಂತೆ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.