ಪ್ರಮುಖ ಸುದ್ದಿ

ಕುಖ್ಯಾತ ಕಳ್ಳನೋರ್ವನ ಬಂಧನಃ 11 ತೊಲೆ ಚಿನ್ನ, ನಗದು ವಶಕ್ಕೆ

ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮನ ಬಂಧನ

ಕುಖ್ಯಾತ ಕಳ್ಳನೋರ್ವನ ಬಂಧನಃ 11 ತೊಲೆ ಚಿನ್ನ, ನಗದು ವಶಕ್ಕೆ

ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮನ ಬಂಧನ

ಕಳ್ಳನ ಕೈಚಳಕಃ ಬೆಂಬಿಡದೆ ಪತ್ತೆ ಹಚ್ಚಿದ ಪೊಲೀಸರು

yadgiri, ಶಹಾಪುರಃ ಮನೆ ಕಳ್ಳತನ ಮಾಡುವಲ್ಲಿ ಚಾಕಚಕ್ಯತೆ ಹೊಂದಿದ್ದ ಖದೀಮನೋರ್ವನ ಬೆಂಬಿಡದೆ ತನಿಖೆಕೈಗೊಂಡು ಕೊನೆಗೆ ಅವನನ್ನು ಬಂಧಿಸುವಲ್ಲಿ ಶಹಾಪುರ ಪೊಲೀಸರ ತಂಡ ಯಶಸ್ವಿಯಾಗಿದೆ ಎಂದು ಸುರಪುರ ವಲಯ ಪೊಲೀಸ್ ಉಪ ಅಧೀಕ್ಷಕ ಜಾವೀದ್ ಇನಾಂದಾರ ತಿಳಿಸಿದರು.
ನಗರದ ವೃತ್ತ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಹಾಪುರ ತಾಲೂಕಿನ ಗೋಗಿ(ಕೆ) ಮತು ಭೀ.ಗುಡಿ ಠಾಣೆ ವ್ಯಾಪ್ತಿ ಸುಮಾರು ನಾಲ್ಕು ಮನೆ ಕಳ್ಳತನ ಮಾಡಿದ್ದ ಈ ಆರೋಪಿ, ತನ್ನ ಕೈಚಳಕದಿಂದ ಪೊಲೀಸರಿಂದ ಮರೆ ಮಾಚಿಕೊಂಡಿದ್ದ, ಈತನ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮತ್ತು ಕೆಎಸ್‍ಪಿಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೇಶ ಅವರ ಮಾರ್ಗದರ್ಶನದಲ್ಲಿ ಶಹಾಪುರ ವೃತ್ತ ಠಾಣೆಯ ಸಿಪಿಐ ಶರಣಗೌಡ ನ್ಯಾಮಣ್ಣವರ್ ನೇತೃತ್ವದಲ್ಲಿ ಗೋಗಿ ಠಾಣೆಯ ಪಿಎಸ್‍ಐ ದೇವಿಂದ್ರರಡ್ಡಿ (ಕಾ ಆಂಡ್ ಸು) ಹಾಗೂ ಇದೇ ಠಾಣೆಯ ಪಿಎಸ್‍ಐ ಚಂದ್ರನಾಥ (ತನಿಖೆ) ಸೇರಿದಂತೆ ಪೊಲೀಸರನ್ನು ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡ ತನಿಖೆಕೈಗೊಂಡು ಆರೋಪಿ ವಿಜಯಪುರ ತಾಲೂಕಿನ ಹೊನ್ನಾಳಿ ಗ್ರಾಮದ ನಿವಾಸಿ ಸಂತೋಷ ನಂದ್ಯಾಳ(43) ಎಂಬಾತನನ್ನು ಬಂಧಿಸಲಾಗಿದೆ.
ಬಂಧನ ವೇಳೆ ಈತನ ಹತ್ತಿರ 11 ತೊಲೆ ಬಂಗಾರ ಮತ್ತು 4,15,500 ರೂಪಾಯಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟು ಚಿನ್ನ ಮತ್ತು ನಗದು ಸೇರಿ 15,15,500 ರೂಪಾಯಿ ಮೌಲ್ಯದ್ದಾಗಿದೆ ಎಂದು ಮಾಹಿತಿ ನೀಡಿದ ಅವರು, ತಮ್ಮ ತಂಡ ಖ್ಯಾತ ಕಳ್ಳನ ಬಂಧಿಸುವಲ್ಲಿ ಯಶಸ್ವಿ ಪಾತ್ರ ನಿರ್ವಹಿಸಿದ್ದ ವೃತ್ತ ನಿರೀಕ್ಷಕ ಶರಣಗೌಡ ನ್ಯಾಮಣ್ಣನವರ್, ಇರ್ವರು ಪಿಎಸ್‍ಐ ಸೇರಿದಂತೆ ಹೆಡ್ ಕಾನ್ಸಟೇಬಲ್ ದೇವಿಂದ್ರಪ್ಪ, ಪೊಲೀಸರಾದ ಶ್ರೀಶೈಲ ಸಜ್ಜನ್, ಭೀಮನಗೌಡ, ಬಸನಗೌಡ, ನಾಗಪ್ಪ, ಸೋಮಯ್ಯ ಇತರರಿಗೆ ಅಭಿನಂದನೆ ಸಲ್ಲಿಸಿದರು.

 

ಕಳ್ಳನ ಜಾಡು ಪತ್ತೆ ಮಾಡಿದ್ದು ಹೇಗೆ..?

ಶಹಾಪುರಃ ನಾಲ್ಕು ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡ, ಮನೆ ಕಳುವು ಮಾಡುವಾಗ ಆತನ ಬೆರಳಚ್ಚು ಗುರುತು ಪತ್ತೆ ಮಾಡಿ, ಈ ಮೊದಲು ಕಳ್ಳತನ ಮಾಡಿರುವ ಬೆರಳಚ್ಚು ಓಲಿಕೆಯಾಗಿದ್ದು, ಕಳ್ಳನ ಪತ್ತೆಗೆ ನಾನಾ ಕಸರತ್ತು ನಡೆಸಿದ್ದಾರೆ. ಕಳ್ಳ ಸಾರ್ವಜನಿಕರ ಫೋನ್ ಪಡೆದು ಮನೆಗೆ ಮಾತನಾಡುತ್ತಿರುವದು ಪತ್ತೆ ಮಾಡಿದ ಪೊಲೀಸರು, ಅದರ ಜಾಡು ಹಿಡಿದು ಬೆನ್ನಟ್ಟಿದ್ದಾರೆ. ಆಗ, ಸುರಪುರದ ಶಾಪಿಂಗ್ ಮಹಲ್‍ನಲ್ಲಿ ನಾಗರಿಕರೊಬ್ಬರ ಮೊಬೈಲ್ ನಿಂದ ಮಾತನಾಡಿರುವದು ಪತ್ತೆ ಮಾಡಲಾಗಿ, ಶಾಪಿಂಗ್ ಮಹಲ್ ಗೆ ತೆರಳಿದ ಪೊಲೀಸರು, ಆರೋಪಿ ಭಾವಚಿತ್ರ ತೋರಿಸಿ ವಿಚಾರಿಸಲಾಗಿ, ಆರೋಪಿ ಈತನೆ ಶಾಪಿಂಗ್‍ಗೆ ಬಂದಿದ್ದ ಎಂಬುದು ತಿಳಿದು ಬಂದಿದೆ. ತಕ್ಷಣ ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿ ಆತ ಕಾರಿನಲ್ಲಿ ತನ್ನ ಪತ್ನಿಯೊಂದಿಗೆ ಶಾಪಿಂಗ್ ಮುಗಿಸಿಕೊಂಡು ಹೊರಟಿರುವದು ತಿಳಿದಿದೆ.
ಕೂಡಲೇ ಆ ಕಾರು ನಂಬರ್ ತೆಗೆದುಕೊಂಡು ಆ ಕಾರಿನ ಮಾಲೀಕನ ಮನೆಗೆ ಪೊಲೀಸರು ತೆರಳಿದ್ದಾರೆ. ಕಾರು ಮಾಲೀಕ ನಾನು ಕಾರು ಬಾಡಿಗೆಗೆ ನೀಡುತ್ತೇನೆ. ಆದರೆ ಆತನ ಮೊಬೈಲ್ ನಂಬರ್ ನನ್ನ ಹತ್ತಿರ ಇಲ್ಲ ಆತನ ಪತ್ನಿ ನಂಬರ್ ಕೊಟ್ಟಿದ್ದಾನೆ ನೋಡಿ ಎಂದು ಆರೋಪಿಯ ಪತ್ನಿ ನಂಬರ್ ಪಡೆದು ಸೀದಾ ಆರೋಪಿ ಪತ್ತೆ ಮಾಡುವ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ತನ್ನ ಕೈಚಳಕದಿಂದ ಪೊಲೀಸರ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತ ಚಾಪೆ ಬುಡ ಸೇರಿದರೆ, ರಂಗೋಲಿ ಬುಡಕ್ಕೆ ಇಳಿದಿದ್ದಾರೆ. ಹೀಗಾಗಿ ಆರೋಪಿ ಬಂಧಿಸುವಲ್ಲಿ ತಂಡದ ಕಸರತ್ತು ಯಶಸ್ವಿಯಾಗಿದೆ ಎಂದು ಡಿವೈಎಸ್ಪಿ ಅವರು ವಿವರಿಸಿದರು.

Related Articles

Leave a Reply

Your email address will not be published. Required fields are marked *

Back to top button