ಕುಂಚ ಕಲೆಯಿಂದ ಭಾವನೆ ಸೆರೆ ಹಿಡಿಯುವ ಪ್ರಶಾಂತ ಗುಂಬಳಾಪುರಮಠ..!
ಕುಂಚ ಕಲೆಯಿಂದ ಭಾವನೆ ಸೆರೆ ಹಿಡಿಯುವ ಪ್ರಶಾಂತ
ಶಹಾಪುರ: ಮನುಷ್ಯನ ಮನಸ್ಸಿನ ಭಾವನೆಗಳನ್ನು ತನ್ನ ಕುಂಚ ಕಲೆಯಿಂದ ಸೆರೆ ಹಿಡಿಯುವ ಪ್ರಶಾಂತಕುಮಾರ ಗುಂಬಳಾಪುರಮಠ ಅವರು, ಪ್ರತಿಭಾವಂತ ಯುವ ಕಲಾವಿದರಾಗಿದ್ದಾರೆ. ಮನಸ್ಸಿನಲ್ಲಿ ಅಡಗಿರುವ ನೋವು, ನಿರಾಸೆ, ಸಂತೋಷ, ದ್ವೇಷ, ಖುಷಿ, ಆಸೆ ಸೇರಿದಂತೆ ವಿವಿಧ ಭಾವನೆಗಳು ತನ್ನ ಕಲೆಯಲ್ಲಿ ವಿಶಿಷ್ಟವಾಗಿ ಅರಳಿಸುತ್ತಾನೆ ಎಂದು ಕಲ್ಬುರ್ಗಿಯ ಚಿತ್ರಕಲಾ ಪ್ರಾಧ್ಯಾಪಕ ಪ್ರೊ.ಲೋಕಯ್ಯ ಹಿರೇಮಠ ತಿಳಿಸಿದರು.
ನಗರದ ಕಸಾಪ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಧನ ಸಹಾಯದ ವತಿಯಿಂದ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಚಿತ್ರಕಲಾವಿದ ಪ್ರಶಾಂತಕುಮಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಲಲಿತ ಕಲೆಗಳಲ್ಲಿ ವಿಶಿಷ್ಟ ಕಲಾ ಪ್ರಕಾರಗಳಾಗಿರುವ ಚಿತ್ರಕಲೆಯಲ್ಲಿ ಅಕ್ರಾಲಿಕ, ಜಲವರ್ಣ ತೈಲವರಣ ಮುಂತಾದ ಪ್ರಕಾರಗಳಲ್ಲಿ ಆಧುನಿಕ ಶೈಲಿಯನ್ನು ಆಳವಡಿಸಿಕೊಂಡು ಕೃಷಿ ಮಾಡುತ್ತಿರುವ ಪ್ರಶಾಂತ ನಾಡಿನ ಶ್ರೇಷ್ಠ ಕಲಾವಿದರಾಗಿ ಬೆಳೆಯಲಿ ಎಂದು ಹಾರೈಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಗುರು ಪಾಟೀಲ ಶಿರವಾಳ, ಶಹಾಪುರದ ಸಾಂಸ್ಕøತಿಕ ಪರಿಸರದಲ್ಲಿ ವೈವಿಧ್ಯಮಯ ಚಿತ್ರಕಲೆಗಳನ್ನು ಅಭಿವ್ಯಕ್ತ ಪಡಿಸುತ್ತಿರುವ ಪ್ರಶಾಂತ ಕುಮಾರ ಗುಂಬಳಾಪುರಮಠ ಅವರ ಸಾಧನೆ ನಿಜಕ್ಕೂ ಅವರ ಪ್ರತಿಭೆಗೆ ಕೈಗನ್ನಡಿಯಾಗಿದೆ.
ಪ್ರಸ್ತುತ ಚಿತ್ರಕಲೆಗೆ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಶಹಾಪುರದ ಎಲ್ಲಾ ಚಿತ್ರಕಲಾವಿದರು ಒಗ್ಗಟ್ಟಾಗಿ ಚಿತ್ರಸಂತೆ ಮಾಡಿದರೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗುಂಬಳಾಪುರ ಮಠದ ಸಿದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಸಾಪ ತಾಲೂಕಾ ಅಧ್ಯಕ್ಷ ಸಿದ್ಧಲಿಂಗಣ್ಣ ಆನೇಗುಂದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ ಸೋಮಶೇಖರ ಅರಳಗುಂಡಿಗಿ, ಖಾಸಿಂಅಲಿ ಹುಜರತಿ, ಬಸವರಾಜ ಆನೇಗುಂದಿ, ಎಸ್.ಟಿ.ಒ ಬಸವರಾಜ ಕುಂಬಾರ ಉಪಸ್ಥಿತರಿದ್ದರು.
ಚಿತ್ರಕಲಾವಿದ ರುದ್ರಪ್ಪ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಕುಲಕರ್ಣಿ ನಿರೂಪಿಸಿದರು. ಗೀತಾ ಹಿರೇಮಠ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ ಸ್ವಾಗತಿಸಿದರು. ಬಸವರಾಜ ಸಿನ್ನೂರು ವಂದಿಸಿದರು.
Best wishes to Prashant
Thank u
Nice sir. Prashant is Great artist. & He is collected old coins. Old utensils & many things. His aim is making museum..all the best Prashant G’math
S…thank u..