ವಿನಯ ವಿಶೇಷ
ಅಸ್ವಸ್ಥರಿಗೆ ತಲಾ 10 ಸಾವಿರ ನೆರವು ನೀಡಿದ ಶಾಸಕ ರಾಜೂಗೌಡ
ವಿಷ ನೀರು ಸೇವನೆ ಅಸ್ವಸ್ತಗೊಂಡವರಿಗೆ ರಾಜೂಗೌಡ ಧನ ಸಹಾಯ
ಯಾದಗಿರಿ, ಶಹಾಪುರಃ ಸುರಪುರ ತಾಲೂಕಿನ ಮುದನೂರ ಸಮೀಪದ ತೆಗ್ಗಳ್ಳಿ ಮತ್ತು ಶಖಾಪುರ ಗ್ರಾಮದಲ್ಲಿ ವಿಷಯುಕ್ತ ನೀರು ಸೇವಿಸಿ ಅಸ್ವಸ್ಥಗೊಂಡ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದವರಿಗೆ ಸುರಪುರ ಶಾಸಕ ರಾಜೂಗೌಡ ವಯಕ್ತಿಕವಾಗಿ ತಲಾ 10 ಸಾವಿರ ರೂ. ನೆರವು ನೀಡಿದ್ದಾರೆ.
ಅಲ್ಲದೆ ಇದೇ ಸಂದರ್ಭದಲ್ಲಿ ಅಸ್ವಸ್ತಗೊಂಡವರಲ್ಲಿ ಧೈರ್ಯ ತುಂಬಿದ್ದು, ಎಲ್ಲರೂ ಗುಣಮುಖರಾಗುತ್ತೀರಿ ಯಾರು ಹೆದರುವ ಅಗತ್ಯವಿಲ್ಲ. ನುರಿತ ವೈದ್ಯರ ತಂಡ ನಿಮ್ಮ ಜೊತೆಗಿದೆ ಎಂದು ಧೈರ್ಯ ತುಂಬಿದರು.
ರಾಜೂಗೌಡರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರಿಗೆ ತಲಾ 10 ಸಾವಿರ ರೂ. ನಗದು ನೀಡಿದರು. ಈ ಸಂದರ್ಭದಲ್ಲಿ ಸುರಪುರದ ಶಂಕರ ನಾಯಕ, ಯುವ ಮುಖಂಡರಾದ ಗುರು ಕಾಮಾ, ಶ್ರೀಕಾಂತ ಸುಬೇದಾರ, ಅಶೋಕ ತಳವಾರ ಇತರರಿದ್ದರು.