ಬೆಳಗಾವಿಃ ವಿಕಾಸ ಸೌಧ ಮುಂದೆ ಅತಿಥಿ ಉಪನ್ಯಾಸಕರ ಬೃಹತ್ ಪ್ರತಿಭಟನೆ, ಶಹಾಪುರ ಅತಿಥಿ ಉಪನ್ಯಾಸಕರು ಭಾಗಿ
ಬೆಳಗಾವಿಃ ವಿಕಾಸ ಸೌಧ ಮುಂದೆ ಅತಿಥಿ ಉಪನ್ಯಾಸಕರ ಬೃಹತ್ ಪ್ರತಿಭಟನೆ, ಶಹಾಪುರ ಅತಿಥಿ ಉಪನ್ಯಾಸಕರು ಭಾಗಿ
ಬೆಳಗಾವಿಃ ಇಲ್ಲಿನ ವಿಕಾಸ ಸೌಧ ಎದುರು ಸೇವಾ ಭದ್ರತೆ ಮತ್ತು ಖಾಯಂಗೊಳಿಸುವದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಬೃಹತ್ ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರದ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಹಾಪುರ ಅತಿಥಿ ಉಪನ್ಯಾಸಕರ ಒಕ್ಕೂಟದ ತಾಲೂಕು ಅಧ್ಯಕ್ಷ ಅರ್ಜುನ್ ಕನ್ಯಾಕೋಳೂರ ಮಾತನಾಡಿ, ಕಳೆದ ಎರಡು ದಶಕಗಳಿಂದ ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.
ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸದೆ ಹಲವು ತಾರತಮ್ಯ ಅನುಸರಿಸುತ್ತಿದೆ ಆರೋಪಿಸಿದರು.
ಇಂದು ನಾವೆಲ್ಲ ಕಾಲೇಜಿನ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಭಾಗವಹಿಸಿದ್ದೇವೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಇದು ತೊಂದರೆಯಾಗಲಿದೆ.
ಆದರೆ ನಮ್ಮ ಕುಟುಂಬ ನಿರ್ವಹಣೆಗೆ ಸೇವಾ ಭದ್ರತೆ ಅಗತ್ಯವಿದ್ದು, ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಇಲ್ಲವಾದಲ್ಲಿ ಅನಿರ್ದಿಷ್ಟ ಮುಷ್ಕರ ಮುಂದುವರೆಯಲಿದೆ ಎಂದು ಎಚ್ಚರಿಸಿದರು. ರಾಜ್ಯದ ವಿವಿಧ ಕಾಲೇಜುಗಳಿಂದ ಆತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.