ಪ್ರಮುಖ ಸುದ್ದಿ
ಬ್ರಿಟನ್ ನಲ್ಲಿ ಗಾಂಧೀಜಿ ಕನ್ನಡಕ 2.54 ಕೋಟಿಗೆ ಹರಾಜು.!
ಬ್ರಿಟನ್ ನಲ್ಲಿ ಗಾಂಧೀಜಿ ಕನ್ನಡಕಕ್ಕೆ 2.54 ಕೋಟಿಗೆ ಹರಾಜು.!
ಲಂಡನ್‌ಃ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧೀಜಿಯವರ ಚಿನ್ನ ಲೇಪಿತ ಕನ್ನಡಕವೊಂದು ಸರಿ ಸುಮಾರ 2.54 ಕೋಟಿಗೆ ಹರಾಜುವೊಂದರಲ್ಲಿ ಮಾರಾಟವಾಗಿದೆ ಎಂದು ಬ್ರಿಟನ್ ನ ಹರಾಜು ಸಂಸ್ಥೆ ಯೊಂದು ತಿಳಿಸಿದೆ.
ತಮ್ಮ ಚಿಕ್ಕಪ್ಪನಿಗೆ ಗಾಂಧೀಜಿಯವರು ನೀಡಿಲಾಗಿದ್ದ ಎನ್ನಲಾದ ಕನ್ನಡಕವನ್ನು ವ್ಯಕ್ತಿಯೊಬ್ಬರು ನೀಡಿದ್ದರು ಎಂದು ಕನ್ನಡಕ ಮಾರಾಟವಾದ ಬಳಿಕ “ಈಸ್ಟ್ ಬ್ರಿಸ್ಟಲ್ ಆಕ್ಷನ್” ಸಂಸ್ಥೆ ತನ್ನ ಇನ್ ಸ್ಟ್ರಾಗ್ರಾಂನಲ್ಲಿ ಬರೆದುಕೊಂಡಿದೆ.
ಮಹತ್ವದ ಅಪೂರ್ವವಾದ ವಸ್ತುವೊಂದಕ್ಕೆ ಬಿಡ್ ನಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಹೀಗಾಗಿ ಬಿಡ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಆ ಸಂಸ್ಥೆ ಬರೆದುಕೊಂಡಿದೆ.
ಈ ಕನ್ನಡಕ ದಕ್ಷಿಣ ಆಫ್ರಕಾದಲ್ಲಿ 1920-30 ರ ಅವಧಿಯಲ್ಲಿ ಬ್ರಿಟಿಷ್ ಪೆಟ್ರೋಲಿಯಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ನೀಡಿದ್ದರು ಎಂದು ಸಂಸ್ಥೆ ತಿಳಿಸಿದೆ.