ಪ್ರಮುಖ ಸುದ್ದಿ
ಆಟೋ ಪಲ್ಟಿ ಓರ್ವನ ಸಾವು ನಾಲ್ವರಿಗೆ ಗಾಯ
ಹುಣಸಿಗಿಃ ಆಟೋ ಪಲ್ಟಿ ಓರ್ವನ ಸಾವು
ಯಾದಗಿರಿ: ಆಟೋವೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ನಾಲ್ಕು ಜನರಿಗೆ ತೀವ್ರ ಗಾಯಗಳಾದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಮುಖ್ಯ ರಸ್ತೆಯ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ನಿನ್ನೆ. ನಡೆದಿದೆ.
ಮಾರನಾಳ ಗ್ರಾಮದ ರಾಜೇಸಾಬ್(58) ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಎಂದು ಹೇಳಲಾಗುತ್ತಿದೆ.
ಈತ ಸರ್ಕಾರಿ ಕೆಲಸದ ನಿಮಿತ್ತ ಮಾರನಾಳ ಗ್ರಾಮದಿಂದ ಹುಣಸಗಿ ತಹಶೀಲ್ದಾರ್ ಆಫೀಸ್ಗೆ ಹೊರಟಿದ್ದಾಗ ಈ ಘಟನೆ ಜರುಗಿದೆ.
ನೀಲಪ್ಪ (50), ಸಂಗಣ್ಣ (52), ತಿಪ್ಪಣ್ಣ ಹುಲ್ಲಿಕೇರಿ (60), ಲಕ್ಷ್ಮಣ (50) ಎಂಬವರಿಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಯಾಳುಗಳನ್ನು ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.